alex Certify
ಕನ್ನಡ ದುನಿಯಾ       Mobile App
       

Kannada Duniya

ಮರೆತೂ ಈ ಜಾಗಕ್ಕೆ ಹೋಗಬೇಡಿ: ಅಲ್ಲಿದ್ದಾರೆ ನರಭಕ್ಷಕರು

twitt-10-1

ವಿಶ್ವದ ಅನೇಕ ಕಡೆ ಬುಡಕಟ್ಟು ಜನಾಂಗ ನೆಲೆಸಿದೆ. ಕೆಲ ಬುಡಕಟ್ಟು ಜನಾಂಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಅಲ್ಲಿನವರ ಜೀವನ ಶೈಲಿ, ಅವರ ಸಂಸ್ಕೃತಿ ವಿಶ್ವಕ್ಕೆ ಒಂದು ರಹಸ್ಯವಿದ್ದಂತೆ.

ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ದಟ್ಟ ಕಾಡಿನಲ್ಲಿರುವ ಬುಡಕಟ್ಟು ಜನಾಂಗವೊಂದು ನಿಗೂಢವಾಗಿ ವಾಸ ಮಾಡ್ತಾ ಇದೆ. ಕೊರೊವೈ ಬುಡಕಟ್ಟಿನ ಜನರು ಮನುಷ್ಯರಿಗೇ ಅಪಾಯಕಾರಿ. ಇವರನ್ನು ನರಭಕ್ಷಕರೆಂದೇ ಕರೆಯಲಾಗುತ್ತದೆ.

ಡಚ್ ಮಿಷನರಿ ಈ ಬುಡಕಟ್ಟು ಜನಾಂಗವನ್ನು ಪತ್ತೆ ಹಚ್ಚಿತ್ತು. ಇದಕ್ಕಿಂತ ಮೊದಲು ಯಾರೂ ಈ ಬಗ್ಗೆ ತಿಳಿದಿರಲಿಲ್ಲ. 1947 ರ ನಂತ್ರ ಬುಡಕಟ್ಟು ಜನಾಂಗದ ಜೊತೆ ಜನಸಾಮಾನ್ಯರು ಬೆರೆಯಲು ಶುರುಮಾಡಿದ್ರು. ಇದ್ರಿಂದಾಗಿ ವೇಶ್ಯಾವಾಟಿಕೆ ಕೂಡ ಜಾಸ್ತಿಯಾಯ್ತು. 1999 ರಲ್ಲಿ ಸರ್ಕಾರದ ಕಾರ್ಯಾಚರಣೆಯಿಂದಾಗಿ ಎಲ್ಲವೂ ಬಂದ್ ಆಯ್ತು.

ಜನರ ಆಗು-ಹೋಗು ಇದ್ದರೂ ಹೊರ ಜಗತ್ತಿನ ಜೊತೆ ಇವರಿಗೆ ಸಂಪರ್ಕವಿಲ್ಲ. ಭೂಮಿಯಿಂದ ಸುಮಾರು 6-12 ಮೀಟರ್ ಎತ್ತರದಲ್ಲಿ ಮರದ ಮೇಲೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಸಮುದ್ರದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿ ಇವರು ವಾಸವಾಗಿದ್ದಾರೆ. ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ತಾರೆ ಇವರು. ಇವ್ರ ಬಗ್ಗೆ ಸಾಕಷ್ಟು ಸಾಕ್ಷ್ಯಚಿತ್ರಗಳು ಬಂದಿವೆ. ಮೂಢನಂಬಿಕೆಯನ್ನು ಅಪಾರವಾಗಿ ನಂಬುವ ಇವರು ಮನುಷ್ಯನನ್ನು ಕೊಂದು ಮಾನವನ ಮಾಂಸ ತಿನ್ನುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...