alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಸ್ವರ್ಗದಲ್ಲಿ ನೀವೂ ಪಡೆಯಿರಿ ಈ ಅನುಭವ

ದಕ್ಷಿಣದ ಕಾಶ್ಮೀರ ಮಡಿಕೇರಿ ಪ್ರವಾಸಿಗರ ಸ್ವರ್ಗವೆಂದೇ ಖ್ಯಾತವಾಗಿದೆ. ಮಳೆಗಾಲ, ಚಳಿಗಾಲ ಬೇಸಿಗೆ ಕಾಲದಲ್ಲಿ ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಚಳಿಗಾಲದಲ್ಲಂತೂ ಮಂಜಿನ ನಗರಿ ಪ್ರವಾಸಿಗರ ಫೇವರೇಟ್ ಪ್ಲೇಸ್ ಆಗಿದೆ. ಹಿತವಾದ ತಂಗಾಳಿ, ನೇಸರನ ಕಣ್ಣಾಮುಚ್ಚಾಲೆ, ಹಸಿರನ್ನು ಹೊದ್ದ ಬೆಟ್ಟ, ಗುಡ್ಡಗಳನ್ನು ಕಣ್ತುಂಬಿಕೊಳ್ಳುವುದು ಮನಸಿಗೆ ಮುದ ನೀಡುತ್ತದೆ.

ಅದರಲ್ಲಿಯೂ ಚಳಿಗಾಲದಲ್ಲಿ ಇಲ್ಲಿ ವಿಹರಿಸುವುದು ರೋಮಾಂಚಕ ಅನುಭವ. ಮೋಡದಲ್ಲಿ ಮರೆಯಾಗುವ ಸೂರ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಾನೆ. ಮೋಡಗಳ ಮರೆಯಲ್ಲಿ ರವಿತೇಜನ ರಂಗಿನಾಟ, ಚುಮುಚುಮು ಚಳಿಯ ಚೆಲ್ಲಾಟ ಕಂಡು, ತಂಪಾದ ಗಾಳಿ ಬೀಸುವಾಗ ಹಿತವಾದ ಅನುಭವ ಪಡೆಯುತ್ತಿರುವ ಪ್ರವಾಸಿಗರ ಕಲರವದಿಂದ ಮಡಿಕೇರಿ ಚಳಿಗಾಲದಲ್ಲಿ ರಂಗೇರಿದೆ.

ಕಾಫಿನಾಡು ಕೊಡಗಿನಲ್ಲೀಗ ಪ್ರವಾಸಿಗರದ್ದೇ ಕಾರುಬಾರು. ಮಳೆಗಾಲ ಮುಗಿದು ಹಸಿರನ್ನು ಹೊದ್ದು ಕಂಗೊಳಿಸುತ್ತಿರುವ ಪ್ರಕೃತಿಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ. ದೇಶದ ವಿವಿಧೆಡೆಯಿಂದ ಬರುತ್ತಿರುವ ಪ್ರವಾಸಿಗರ ಸಂಭ್ರಮ ಹೇಳತೀರದಾಗಿದೆ.

ಕೊಡಗಿನ ಮುಕುಟಮಣಿ ಎಂದೇ ಹೇಳಲಾಗುವ ರಾಜಾಸೀಟ್ ನಲ್ಲಿ ಪ್ರವಾಸಿಗರ ಸಂಭ್ರಮ ಎಲ್ಲೆ ಮೀರಿದೆ. ಸಂಜೆ ಸೂರ್ಯಾಸ್ತವನ್ನು ಇಲ್ಲಿಗೆ ಬರುವ ಪ್ರವಾಸಿಗರು ಕಣ್ತುಂಬಿಕೊಳ್ತಾರೆ. ಪ್ರಕೃತಿ ಮಾತೆಗೆ ತಿಲಕವಿಟ್ಟಂತೆ ಕಾಣುವ ಸೂರ್ಯ ಮೋಡದ ಮರೆಯಲ್ಲಿ ಮರೆಯಾಗುವ ದೃಶ್ಯ ವೈಭವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಮಾಗಿಯ ಚಳಿಯಲ್ಲಿ ಇಲ್ಲಿನ ಅಂದವನ್ನು ಹೆಚ್ಚಿಸಿರುವ ಹೂವುಗಳನ್ನು ಕಣ್ತುಂಬಿಕೊಂಡರೆ, ಮನಸಿಗೆ ಉಲ್ಲಾಸವಾಗುತ್ತದೆ. ಈ ದೃಶ್ಯ ವೈಭವವನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...