alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಗಾರು ಪೂರ್ವ ಮಳೆಗೆ ಹೊಸರೂಪ ಪಡೆದ ಮಡಿಕೇರಿ

madiker-tt

ದಕ್ಷಿಣದ ಕಾಶ್ಮೀರ ಎಂದು ಹೇಳಲಾಗುವ ಮಡಿಕೇರಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಮಂಜಿನ ನಾಡಲ್ಲಿ ರಜೆಯ ಮಜಾ ಅನುಭವಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ.

ಮುಂಗಾರು ಪೂರ್ವ ಮಳೆಗೆ ಮಡಿಕೇರಿ ಹೊಸ ರೂಪ ಪಡೆದುಕೊಂಡಿದ್ದು, ಮಳೆಗೆ ಮೈಯೊಡ್ಡಿ ನಿಂತಿರುವ ನಿಸರ್ಗ ಸಿರಿಯ ಚೆಲುವನ್ನು ಕಣ್ತುಂಬಿಕೊಂಡು ಪ್ರವಾಸಿಗರು ಸಂಭ್ರಮಿಸುತ್ತಾರೆ.

ರಾಜಾಸೀಟ್, ಭಾಗಮಂಡಲ ಸೇರಿದಂತೆ ಜಿಲ್ಲೆಯ ಪ್ರವಾಸಿ ಕೇಂದ್ರಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಇಲ್ಲಿನ ಆಹ್ಲಾದಕರ ವಾತಾವರಣಕ್ಕೆ ಮನಸೋತ ಪ್ರವಾಸಿಗರು ಖುಷಿಯಿಂದ ತೆರಳುತ್ತಾರೆ.

ಬೇಸಿಗೆಯಲ್ಲಿ ಮಕ್ಕಳಿಗೆ ಶಾಲೆ, ಕಾಲೇಜುಗಳಿಗೆ ರಜೆ ಇರುತ್ತದೆ. ಕುಟುಂಬದವರೆಲ್ಲ ಸೇರಿಕೊಂಡು ಪ್ರವಾಸ ಹೋಗುವುದು ಸಾಮಾನ್ಯ. ಹೀಗೆ ಪ್ರವಾಸಕ್ಕೆ ಹೊರಡುವಾಗ ಹೆಚ್ಚಿನವರ ಆಯ್ಕೆ ಈ ಬಾರಿ ಮಡಿಕೇರಿ ಜಿಲ್ಲೆಯಾಗಿದೆ.

ಪ್ರತಿ ವರ್ಷಕ್ಕಿಂತ ಹೆಚ್ಚಿನ ಪ್ರವಾಸಿಗರು ಮಡಿಕೇರಿಗೆ ಬಂದು ಹಿತಕರವಾದ ವಾತಾವರಣದ ಅನುಭವ ಪಡೆಯುತ್ತಿದ್ದಾರೆ.

ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಿಂದಲೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿ ಮಂಜಿನ ನಾಡಿನ ವೈಭವಕ್ಕೆ ಮನಸೋತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...