alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಚಾಚಿದ ಕೈಗೆ ತಾಗುತಿದೆ ಆಕಾಶ

madikeri

‘ಮೊದಲ ಮಳೆಯಂತೆ….ಚಾಚಿದ ಕೈಗೆ ಆಕಾಶವೇ ತಾಗಿದೆ….’ ಹಾಡನ್ನು ನೆನಪಿಸುವಂತಿದೆ ಧರೆಗಿಳಿದ ಸ್ವರ್ಗ ಮಡಿಕೇರಿ.

ಹೌದು, ಮಡಿಕೇರಿಯಲ್ಲಿ ಮಳೆ, ಮಂಜು ಹೊಸ ಲೋಕವನ್ನು ಸೃಷ್ಠಿಸಿವೆ. ಹಸಿರ ಸಿರಿಯ ನಡುವೆ ಮೋಡಗಳಿಗೆ ಮುತ್ತಿಕ್ಕುವ ಮೋಡಗಳು, ಮಳೆ, ಮಂಜು ಪ್ರವಾಸಿಗರ ಸ್ವರ್ಗ ಮಡಿಕೇರಿಗೆ ಹೊಸ ಕಳೆಯನ್ನು ತಂದಿವೆ.

ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಡಿಕೇರಿಯ ಸೌಂದರ್ಯ ಮುಂಗಾರು ಮಳೆಯಿಂದಾಗಿ ಹೆಚ್ಚಾಗಿದೆ. ಅಬ್ಬಿಫಾಲ್ಸ್, ದುಬಾರೆ, ರಾಜಾಸೀಟ್, ಕಾಫಿ ತೋಟಗಳು ಮಾತ್ರವಲ್ಲ, ಆಗಾಗ ಇಣುಕುವ ಸೂರ್ಯ, ರಸ್ತೆಯಲ್ಲಿ ಕಾಣಸಿಗುವ ಬಣ್ಣ ಬಣ್ಣದ ಕೊಡೆಗಳು ಕೊಡಗಿನ ಅಂದವನ್ನು ಹೆಚ್ಚಿಸಿವೆ.

ಮೈಮನ ಮುದಗೊಳಿಸುವ ಮಡಿಕೇರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ನೆರೆದಿದೆ. ಮಳೆಗಾಲದಲ್ಲಿನ ಮಡಿಕೇರಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡತೊಡಗಿದ್ದಾರೆ. ನೀವೂ ಒಮ್ಮೆ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...