alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಸ್ವರ್ಗ ಮಡಿಕೇರಿಗೆ ಮುತ್ತಿಟ್ಟ ಮೋಡಗಳು

madiker-ma

ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮಳೆಗೆ ಕಾಫಿ ತೋಟಗಳೆಲ್ಲ ಕಂಗೊಳಿಸುತ್ತಿವೆ.

ಮುಂಗಾರು ಮಳೆ ಕೂಡ ಜೋರಾಗಿದ್ದು, ಇಬ್ಬನಿ ತಬ್ಬಿದ ಇಳೆಯಲಿ ಪ್ರವಾಸಿಗರು ಹೊಸ ಅನುಭವ ಪಡೆಯತೊಡಗಿದ್ದಾರೆ. ಬೆಟ್ಟಗಳ ಸಾಲಿನ ಮೇಲೆ ಹಾಲಿನ ಅಭಿಷೇಕವಾದಂತೆ ಕಾಣುತ್ತಿದೆ.

ತಣ್ಣನೆಯ ಗಾಳಿ, ಮಂಜು, ಮಳೆ, ಸಮೀಪದಲ್ಲಿಯೇ ಹಾದು ಹೋಗುವ ಮೋಡಗಳನ್ನು ಕಂಡ ಪ್ರವಾಸಿಗರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.

ಚುಮುಚುಮು ಚಳಿಯಲ್ಲಿ ದೇವರ ದರ್ಶನ ಪಡೆಯುವ ಭಕ್ತರು, ನಿಸರ್ಗದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸತೊಡಗಿದ್ದಾರೆ.

ಕಾವೇರಿಯ ಉಗಮ ಸ್ಥಾನ ತಲಕಾವೇರಿ, ರಾಜಾ ಸೀಟ್ ಮೊದಲಾದ ಕಡೆಗಳಲ್ಲಿ ಪ್ರವಾಸಿಗರ ದಂಡೇ ನೆರೆದಿದೆ. ಹಿಮದಲ್ಲಿ ಮಿಂದೇಳುತ್ತಿರುವ ಪ್ರವಾಸಿಗರು ಅಪರೂಪದ ದೃಶ್ಯಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ, ಫೋಟೋ ತೆಗೆಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ನಿಸರ್ಗ ಸೌಂದರ್ಯದಿಂದ ಮುದನೀಡುವ ಮಡಿಕೇರಿ ಪ್ರವಾಸಿಗರಿಂದ ತುಂಬಿ ತುಳುಕುತಿದ್ದು, ನೀವೂ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...