alex Certify
ಕನ್ನಡ ದುನಿಯಾ       Mobile App
       

Kannada Duniya

ಆಗಸ್ಟ್ ನಲ್ಲಿ ಸಾಲು ಸಾಲು ರಜೆ, ಇಲ್ಲಿದೆ ಹಾಲಿಡೇ ಪ್ರವಾಸಕ್ಕೆ ಪ್ಲಾನ್

trip

ಈ ವರ್ಷ ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ರಜೆಗಳು ಬಂದಿವೆ. ಈ ತಿಂಗಳು 10 ಪ್ರಮುಖ ಹಬ್ಬಗಳಿವೆ. 9 ಸರ್ಕಾರಿ ರಜೆಗಳು ಸಿಗುತ್ತಿವೆ. ಭಾರತಕ್ಕೆ ಸ್ವತಂತ್ರ ಸಿಕ್ಕಿದ್ದು ಕೂಡ ಆಗಸ್ಟ್ ನಲ್ಲೇ. ಸಾಲು ಸಾಲು ರಜೆಯನ್ನು ಸದುಪಯೋಗಪಡಿಸಿಕೊಳ್ಳಲು ಎಲ್ಲರೂ ಪ್ಲಾನ್ ಮಾಡ್ತಿದ್ದಾರೆ. ಸುಂದರ ತಾಣಗಳಿಗೆ ಪ್ರವಾಸ ಹೋಗಲು ನಿರ್ಧರಿಸಿದ್ದಾರೆ. ಯಾವ್ಯಾವಾಗ ರಜೆಗಳು ಸಿಗ್ತಿವೆ? ರಜೆಯನ್ನು ಹೇಗೆ ಕಳೆಯಬಹುದು ಅನ್ನೋದನ್ನು ನೋಡೋಣ.

ಆಗಸ್ಟ್ 5ರಿಂದ 7ರವರೆಗೆ ರಜಾ ಇದೆ. ಶನಿವಾರ, ಭಾನುವಾರ ರಜೆ, ಜೊತೆಗೆ ಸೋಮವಾರ ರಕ್ಷಾ ಬಂಧನ. ಮೂರು ದಿನ ನೀವು ಆರಾಮಾಗಿ ಪ್ರವಾಸಕ್ಕೆ ಹೋಗಿ ಬರಬಹುದು. ಮುನ್ನಾರ್, ಕೊಡೈಕೆನಾಲ್, ಗೋವಾ, ಬಿಕನೇರ್, ಶಿಮ್ಲಾ ಅಥವಾ ಮಸ್ಸೂರಿಗೆ ಟ್ರಿಪ್ ಹೋಗಿ ಬನ್ನಿ.

ಆಗಸ್ಟ್ 12 ರಿಂದ 15ರವರೆಗೆ ರಜಾ ಇದೆ. ಆಗಸ್ಟ್ 15ರಂದು ಭಾರತದಲ್ಲಿ 70ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗ್ತಿದೆ. ಅದಕ್ಕೂ ಮುನ್ನ ಶ್ರೀಕೃಷ್ಣ ಜನ್ಮಾಷ್ಠಮಿ ಬಂದಿದೆ. ದೇಶದ ಬಹುತೇಕ ಕಡೆಗಳಲ್ಲಿ ಇದನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಎರಡೂ ವೀಕೆಂಡ್ ನಲ್ಲಿ ಬಂದಿರೋದ್ರಿಂದ ನಿಮಗೆ 4 ದಿನಗಳ ರಜಾ ಸಿಗುತ್ತದೆ. ಫ್ರೆಂಡ್ಸ್ & ಫ್ಯಾಮಿಲಿ ಜೊತೆಗೆ ನೀವು ಔಟಿಂಗ್ ಹೋಗಬಹುದು. ಜೈಪುರ, ಉತ್ತರಾಖಂಡ, ಕೂರ್ಗ್ ಅಥವಾ ಮಧ್ಯಪ್ರದೇಶದ ಸುಂದರ ತಾಣಗಳಿಗೆ ವಿಸಿಟ್ ಕೊಡಿ.

ಆಗಸ್ಟ್ 25 ರಿಂದ 27ರವರೆಗೆ ಅಂದ್ರೆ ಮೂರು ದಿನ ರಜಾ ಸಿಗ್ತಿದೆ. ಆಗಸ್ಟ್ 25ಕ್ಕೆ ಅಂದ್ರೆ ಶುಕ್ರವಾರ ಗಣೇಶ ಚತುರ್ಥಿ. ಅಂದು ಸರ್ಕಾರಿ ರಜಾ ಇದೆ. ನಂತರ ಶನಿವಾರ ಮತ್ತು ಭಾನುವಾರ ಬಂದಿರೋದ್ರಿಂದ ಮೂರು ದಿನ ನೀವು ರಜೆಯ ಮಜಾ ಅನುಭವಿಸಬಹುದು. ಗೋಕರ್ಣ, ಜೋಗ್ ಫಾಲ್ಸ್, ಗುಜರಾತ್ ನ ಕಚ್ ಅಥವಾ ಮಹಾರಾಷ್ಟ್ರಕ್ಕೆ ಪ್ರವಾಸ ತೆರಳಬಹುದು.

ಮೂರು ಚಿಕ್ಕ ಚಿಕ್ಕ ಹಾಲಿಡೇ ಬದಲು ಒಮ್ಮೆಲೇ ದೀರ್ಘ ರಜೆ ಹಾಕುವುದು ಕೂಡ ಸಾಧ್ಯವಿದೆ. ಆಗಸ್ಟ್ 12 ರಿಂದ 15ರವರೆಗೆ ರಜಾ ಇದೆ. ನಂತರ 17ಕ್ಕೆ ಮಹಾರಾಷ್ಟ್ರದಲ್ಲಿ ಸರ್ಕಾರಿ ರಜಾ ಇರೋದ್ರಿಂದ ಇನ್ನೆರಡು ದಿನ ಲೀವ್ ಹಾಕಿದ್ರೆ 9 ದಿನಗಳ ಪ್ರವಾಸ ಮಾಡಬಹುದು. ಮನಾಲಿ, ಸಿಕ್ಕಿಂ, ಶಿಲ್ಲಾಂಗ್, ಡಾರ್ಜಿಲಿಂಗ್ ನಂತಹ ಸುಂದರ ತಾಣಕ್ಕೆ ಹೋಗಿ ಬರಬಹುದು.

ಆಗಸ್ಟ್ 5ರಿಂದ 20ರವರೆಗೆ ಸುದೀರ್ಘ ರಜೆ ಪಡೆಯುವ ಅವಕಾಶವೂ ಇದೆ. ಮಧ್ಯೆ ಮಧ್ಯೆ ಸಾಕಷ್ಟು ರಜಾದಿನಗಳು ಬಂದಿರೋದ್ರಿಂದ ಒಂದೇ ಬಾರಿಗೆ ನೀವು 15 ದಿನ ರಜಾ ಪಡೆದುಕೊಳ್ಳಬಹುದು. ಲೇಹ್, ಲಡಾಕ್, ಅಂಡಮಾನ್ ನಿಕೋಬಾರ್, ಗುವಾಹಟಿ, ಶಿಲ್ಲಾಂಗ್, ಚಿರಾಪುಂಜಿ, ತವಾಂಗ್, ಕೊಹಿಮಾವನ್ನು ಕಣ್ತುಂಬಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...