alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡ ಬನ್ನಿ ಪಾರೆಕಟ್ ಜಲಪಾತ

fallsಕೊಡಗಿನಲ್ಲಿ ಪ್ರವಾಸಿಗರ ಸಂದರ್ಶನಕ್ಕೆ ಯೋಗ್ಯವಾದ ನೂರಾರು ತಾಣಗಳಿವೆ. ಅದರಲ್ಲಿ ದಟ್ಟವಾದ ಕಾನನದ ಮಧ್ಯೆ ಹರಿದು ಬರುವ ಸುಂದರ ಪಾರೆಕಟ್ ಜಲಪಾತವೂ ಒಂದು.

ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ಭಾಗಮಂಡಲ, ತಲಕಾವೇರಿ ಸಮೀಪದಲ್ಲಿಯೇ ಕಾಣುವ ಕಾಲುದಾರಿಯ ಮೂಲಕ ಒಂದು ಕಿ.ಮೀ. ದೂರ ಸಾಗಿದರೆ ಇದು ಸಿಗುತ್ತದೆ. ಈ ಜಲಪಾತವು ಸುಮಾರು 360 ಅಡಿ ಎತ್ತರದಿಂದ ಧುಮುಕಿ ಹಾಲಿನ ನೊರೆಯಂತೆ ಹರಿದು ತನ್ನ ಭೋರ್ಗರೆತವನ್ನು ಸುತ್ತಲೂ ಹರಡಿ ನೋಡುಗರಿಗೆ ಸಂತೋಷ ಮತ್ತು ಉಲ್ಲಾಸ ನೀಡುತ್ತದೆ.

ಪಾರೆಕಟ್ ಜಲಪಾತದ ಭೋರ್ಗರೆತವು ಸುಮಾರು ಒಂದು ಕಿ.ಮೀ. ದೂರದವರೆಗೂ ಕೇಳಿಸುತ್ತದೆ. ಈ ಜಲಪಾತವು ಮಳೆಗಾಲದಲ್ಲಿ ನೋಡಲು ಬಹಳ ಆಕರ್ಷಣೀಯವಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...