alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮನಾಭಸ್ವಾಮಿ ದೇಗುಲಕ್ಕೆ ಬರುವ ಮಹಿಳೆಯರು ನಿರಾಳ

Thiruvananthapuram, India - Padmanabhaswamy temple was built in the Dravidian style and principal deity Vishnu is enshrined in it.

ಭಾರತದ ಅತ್ಯಂತ ಶ್ರೀಮಂತ ದೇಗುಲ ಎನಿಸಿಕೊಂಡಿರುವ ಕೇರಳದ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಮಹಿಳಾ ಭಕ್ತರಿಗೆ ಡ್ರೆಸ್ ಕೋಡ್ ನಲ್ಲಿ ಕೊಂಚ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

ಭಾರತದ ಸಾಂಪ್ರದಾಯಿಕ ಧಿರಿಸುಗಳಾದ ಸಲ್ವಾರ್ ಕಮೀಜ್ ಹಾಗೂ ಚೂಡಿದಾರ್ ಧರಿಸಿಕೊಂಡು ಬರಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಈ ಮೊದಲು ಮಹಿಳೆಯರು ಸಲ್ವಾರ್ ಧರಿಸಿ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಬಂದರೆ ಅದರ ಮೇಲೆ ಮುಂಡು ಉಟ್ಟುಕೊಂಡು ಹೋಗಬೇಕಿತ್ತು. ಆದ್ರೆ ಇನ್ಮೇಲೆ ಸಲ್ವಾರ್ ಮತ್ತು ಚೂಡಿದಾರ್ ಧರಿಸಿ ಮಹಿಳೆಯರು ದೇಗುಲ ಪ್ರವೇಶಿಸಬಹುದು.

ಈ ವಿಚಾರವನ್ನು 30 ದಿನಗಳೊಳಗೆ ಬಗೆಹರಿಸಿಕೊಳ್ಳುವಂತೆ ಇತ್ತೀಚೆಗಷ್ಟೆ ಕೇರಳ ಹೈಕೋರ್ಟ್, ದೇವಸ್ಥಾನ ಆಡಳಿತ ಮಂಡಳಿಗೆ ಸೂಚಿಸಿತ್ತು. ಸಲ್ವಾರ್ ಹಾಗೂ ಚೂಡಿದಾರ್ ಧರಿಸಿ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡುವಂತೆ ಕೋರಿ ದೇವಾಲಯಕ್ಕೆ ಹಲವು ಮಹಿಳೆಯರು ಇ-ಮೇಲ್ ಕಳುಹಿಸಿದ್ದರು. ಆದ್ರೆ ಜೀನ್ಸ್, ಟೈಟ್ಸ್ ಧರಿಸಿ ದೇವಾಲಯ ಪ್ರವೇಶಿಸುವಂತಿಲ್ಲ. ಈ ಮಧ್ಯೆ ಮಹಿಳೆಯರಿಗೆ ಡ್ರೆಸ್ ಕೋಡ್ ವಿನಾಯಿತಿ ನೀಡಿರುವ ಬಗ್ಗೆ ಹಿರಿಯ ಅರ್ಚಕರಾದ ನೆಡುಂಪಿಲ್ಲಿ ತರನಲ್ಲೂರ್ ವಿರೋಧ ವ್ಯಕ್ತಪಡಿಸಿದ್ದಾರೆ, ಇದು ಸಂಪ್ರದಾಯಕ್ಕೆ ವಿರುದ್ಧ ಎಂದಿದ್ದಾರೆ.

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...