alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಹಾಟ್ ಸ್ಪಾಟ್ ನಲ್ಲಿ ಹೊಸಲೋಕ

ಕಾರವಾರ ಕಡಲತೀರ ಪ್ರವಾಸಿಗರ ಹಾಟ್ ಸ್ಪಾಟ್. ರವೀಂದ್ರನಾಥ ಠಾಗೂರ್ ಕಡಲತೀರಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಒಂದೆಡೆ ಹಸಿರು ಹೊದ್ದ ಬೆಟ್ಟಗಳು, ಮತ್ತೊಂದು ಕಡೆ ನೀಲಿ ಕಡಲು. ಕಡಲನ್ನು ಸೇರುವ ನದಿಗಳು. ಇವುಗಳನ್ನು ನೋಡುತ್ತಲೇ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತದೆ.

ಸುಂದರವಾದ ಜಲಪಾತಗಳು ಉತ್ತರ ಕನ್ನಡ ಜಿಲ್ಲೆಯ ಸೌಂದರ್ಯವನ್ನು ಹೆಚ್ಚಿಸಿವೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹಲವು ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಕಡಲಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಸುಂದರವಾದ ಉದ್ಯಾನ ನಿರ್ಮಿಸಲಾಗಿದೆ. ಇದರೊಂದಿಗೆ ಮತ್ಸ್ಯಲೋಕ ಅನಾವರಣಗೊಂಡಿದೆ. ಕಾರವಾರ ಕಡಲ ತೀರಕ್ಕೆ ಬರುವ ಪ್ರವಾಸಿಗರು ಮತ್ಸ್ಯಲೋಕದಲ್ಲಿ ಬಣ್ಣ ಬಣ್ಣದ ನಾನಾ ವಿಧದ ಮೀನುಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಕಾರವಾರದಲ್ಲಿ ಮತ್ಸ್ಯಾಲಯವನ್ನು ಅಭಿವೃದ್ಧಿಪಡಿಸಲಾಗಿದ್ದು, 35 ಕ್ಕೂ ಅಧಿಕ ಬಗೆಯ ಮೀನುಗಳನ್ನು ತರಲಾಗಿದೆ. ಜೊತೆ ನಾನಾ ವಿಧದ ಪಕ್ಷಿಗಳು ಕೂಡ ಇಲ್ಲಿವೆ. ಅಪರೂಪದ ಮೀನು, ಪಕ್ಷಿಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಅರಬ್ಬೀ ಸಮುದ್ರದ ಅಂಚಿನಲ್ಲಿರುವ ಕಾರವಾರ ನಗರದ ರವೀಂದ್ರನಾಥ ಠಾಗೂರ್ ಕಡಲತೀರ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿಗೆ ಹೆಚ್ಚಿನ ಜನ ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡುವ ಪ್ರವಾಸಿಗರು ಬಣ್ಣ ಬಣ್ಣದ ಮೀನು, ಪಕ್ಷಿಗಳನ್ನು ಕಂಡು ಎಂಜಾಯ್ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...