alex Certify
ಕನ್ನಡ ದುನಿಯಾ       Mobile App
       

Kannada Duniya

ಜೋಗ ವೈಭವಕ್ಕೆ ಮಾರುಹೋದ ಪ್ರವಾಸಿಗರು

ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬಂದಿದೆ. 4 ದಿನಗಳ ಕಾಲ ರಜೆ ಇರುವುದರಿಂದ ಹೆಚ್ಚಿನವರು ಪ್ರವಾಸಕ್ಕೆ ತೆರಳಿದ್ದು, ಪ್ರವಾಸಿ ಸ್ಥಳಗಳು, ಪ್ರಮುಖ ದೇವಾಲಯಗಳಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿದೆ.

ಜೋಗ ಜಲಪಾತದಲ್ಲಿ ನೀರಿನ ಹರಿವು ಕಡಿಮೆಯಾಗತೊಡಗಿದೆ. ಆಗಾಗ ಮಳೆಯಾಗುತ್ತಿರುವ ಕಾರಣ ದೃಶ್ಯ ವೈಭವಕ್ಕೇನೂ ಕೊರತೆಯಾಗಿಲ್ಲ.

ಹಸಿರಸಿರಿಯ ನಡುವೆ ಹಾಲ್ನೊರೆಯಂತೆ ರಾಜ, ರಾಣಿ, ರೋರರ್, ರಾಕೆಟ್ ಜಲಧಾರೆಗಳಲ್ಲಿ ನೀರು ಧುಮ್ಮಿಕ್ಕುವ ದೃಶ್ಯವನ್ನು ಕಂಡು ಪ್ರವಾಸಿಗರು ಮಂತ್ರ ಮುಗ್ಧರಾಗುತ್ತಿದ್ದಾರೆ.

ಸಾಲು ಸಾಲು ರಜೆಯ ಮಜಾ ಸವಿಯಲು ಜೋಗ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಜೋಗದಲ್ಲಿನ ದೃಶ್ಯ ವೈಭವಕ್ಕೆ ಮಾರು ಹೋಗುವ ಪ್ರವಾಸಿಗರು ಸಂಜೆಯ ಸಂಗೀತ ಕಾರಂಜಿಗೆ ಆಕರ್ಷಿತರಾಗುತ್ತಾರೆ.

ಮಳೆಯ ವಾತಾವರಣ ಇರುವುದರಿಂದ ದೃಶ್ಯ ವೈಭವ ಕಾಣಸಿಗುತ್ತಿದೆ. ಮಳೆ ಕಡಿಮೆಯಾದಂತೆ ಜಲಧಾರೆಗಳಲ್ಲಿ ನೀರಿನ ಹರಿವು ಕಡಿಮೆಯಾಗಲಿದೆ. ನೀವೂ ಒಮ್ಮೆ ಜೋಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...