alex Certify
ಕನ್ನಡ ದುನಿಯಾ       Mobile App
       

Kannada Duniya

ಜೋಗ ಜಲಪಾತದ ವೈಭವ ಕಣ್ತುಂಬಿಕೊಳ್ಳಿ

jogfalls

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಾಗತೊಡಗಿದೆ. ಮಲೆನಾಡಿನ ಮಳೆಗೆ ಜೋಗ ಜಲಪಾತಕ್ಕೆ ಮತ್ತೆ ಕಳೆ ಬಂದಿದ್ದು, ಪ್ರವಾಸಿಗರು ದೃಶ್ಯ ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ.

ಮಂಜು, ಮಳೆಯಾಟದಲ್ಲಿ ಹಸಿರ ಸಿರಿಯನ್ನು ಹೊದ್ದ ಕಣಿವೆಯಲ್ಲಿ ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳುವುದೇ ಮನಸ್ಸಿಗೆ ಮುದ ನೀಡುತ್ತದೆ.

ಬೇಸಿಗೆಯಲ್ಲಿ ಬಣಗುಟ್ಟುತ್ತಿದ್ದ ಇಡೀ ಪ್ರದೇಶಕ್ಕೆ ಹೊಸ ಕಳೆ ಬಂದಿದೆ. ಮಳೆಗಾಲವಾಗಿರುವುದರಿಂದ ಜೋಗದ ಅಂದ ಹೆಚ್ಚಾಗಿದೆ. ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳ ಮೂಲಕ ಹಾಲಿನ ನೊರೆಯಾಗಿ ನೀರು ಧುಮ್ಮಿಕ್ಕುವ ದೃಶ್ಯ ಮನ ಮೋಹಕವಾಗಿದೆ.

ಪಶ್ವಿಮ ಘಟ್ಟ, ಮಲೆನಾಡು ಮುಂಗಾರು ಮಳೆಗೆ ನಳನಳಿಸುತ್ತಿದ್ದು, ಇವುಗಳ ನಡುವೆ ವಿಶ್ವವಿಖ್ಯಾತ ಜೋಗ ಜಲಪಾತದ ದೃಶ್ಯ ನೋಡುವುದೇ ಕಣ್ಣಿಗೆ ಸೊಬಗು. ಈ ದಿನಗಳಲ್ಲಿ ಪ್ರವಾಸಿಗರ ದಂಡೇ ಜೋಗದತ್ತ ಮುಖ ಮಾಡಿರುತ್ತದೆ.

ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸಿ ಜೋಗದ ಜಲಧಾರೆಯನ್ನು ಕಣ್ತುಂಬಿಕೊಂಡು ಆನಂದಿಸುತ್ತಾರೆ. ಮಳೆಗಾಲದಲ್ಲಿ ಜೋಗವನ್ನು ನೋಡುವುದೇ ಚೆಂದ. ನೀವೂ ಒಮ್ಮೆ ಜೋಗದ ಸಿರಿಯನ್ನು ಕಣ್ತುಂಬಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...