alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಕೃತಿ ಮಡಿಲಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೆ ಇದು ಪ್ರಶಸ್ತ ಸ್ಥಳ

ಮಡಿಕೇರಿ ಪ್ರವಾಸಿಗರ ಹಾಟ್ ಸ್ಪಾಟ್. ಪ್ರಕೃತಿ ಸೌಂದರ್ಯ, ಕಾಫಿ ತೋಟ, ಸೂರ್ಯಾಸ್ತ, ಹಸಿರನ್ನೇ ಹೊದ್ದ ಬೆಟ್ಟ -ಗುಡ್ಡಗಳು, ಜಲಪಾತಗಳು ಒಂದೇ ಎರಡೇ ಮಡಿಕೇರಿಯ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ.

ಮಡಿಕೇರಿಗೆ ವರ್ಷವಿಡಿ ಪ್ರವಾಸಿಗರು ಭೇಟಿ ಕೊಡ್ತಾರೆ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಇಲ್ಲಿನ ವಾತಾವರಣಕ್ಕೆ ಮನಸೋಲದವರಿಲ್ಲ. ಈಗ ಪ್ರಕೃತಿ ಮಡಿಲಲ್ಲಿ ಹೊಸ ವರ್ಷಾಚರಣೆಯನ್ನು ಮಾಡಿಕೊಳ್ಳಬೇಕೆಂದು ಬಯಸುವವರು ಜಾಸ್ತಿ.

ನಗರದ ಜಂಜಾಟದಿಂದ ಹೊರಗೆ ಪ್ರಕೃತಿಯ ಮಡಿಲಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಹೆಚ್ಚಿನ ಮುದ ನೀಡುತ್ತದೆ. ಕ್ರಿಸ್ ಮಸ್, ನ್ಯೂ ಇಯರ್ ರಜೆಯ ಕಾರಣದಿಂದ ಮಡಿಕೇರಿ ಜಿಲ್ಲೆಯಲ್ಲಿ ಪ್ರವಾಸಿಗರ ದಂಡೇ ನೆರೆದಿದೆ. ಅದರಲ್ಲಿಯೂ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಜನರ ದಂಡೇ ನೆರೆದಿದೆ.

ವಿರಾಜಪೇಟೆ ತಾಲ್ಲೂಕಿನ ಇರ್ಪು ಜಲಪಾತ ನ್ಯೂ ಇಯರ್ ಸೆಲೆಬ್ರೇಷನ್ ಗೆ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿದೆ. ಮಂಜಿನ ನಡಿವೆ ಹಸಿರು ಬೆಟ್ಟಗಳ ಮೇಲಿನಿಂದ ಲಕ್ಷ್ಮಣ ತೀರ್ಥ ನದಿ ಧುಮ್ಮಿಕ್ಕುವ ದೃಶ್ಯ ನಯನಮನೋಹರವಾಗಿದೆ. ನ್ಯೂ ಇಯರ್ ಸೆಲೆಬ್ರೇಷನ್ ಪ್ರಕೃತಿ ಮಡಿಲಲ್ಲಿ ಕಳೆಯಲು ಪ್ರವಾಸಿಗರ ದಂಡೇ ನೆರೆದಿದೆ.

ತಣ್ಣನೆಯ ನೀರಿನಲ್ಲಿ ಮಿಂದೇಳುವ ಪ್ರವಾಸಿಗರು ಇಲ್ಲಿನ ವಾತಾವರಣಕ್ಕೆ ಮನಸೋಲುತ್ತಾರೆ. ಕೊಡಗು ಜಿಲ್ಲೆಯಲ್ಲಿ ಇನ್ನೂ ಹಲವಾರು ಪ್ರವಾಸಿ ತಾಣಗಳಿದ್ದು, ಹೊಸ ವರ್ಷಕ್ಕೆ ಈಗಲೇ ಪ್ಲಾನ್ ಮಾಡಿಕೊಂಡು ಪ್ರವಾಸಕ್ಕೆ ಹೊರಡಿ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...