alex Certify
ಕನ್ನಡ ದುನಿಯಾ       Mobile App
       

Kannada Duniya

21 ಸಾವಿರದಲ್ಲಿ ಸುತ್ತಿ ಬನ್ನಿ ಅಂಡಮಾನ್: ಐ ಆರ್ ಸಿ ಟಿ ಸಿ ನೀಡ್ತಿದೆ ಆಫರ್

ಅಂಡಮಾನ್ ನಿಕೋಬಾರ್ ಸುತ್ತುವ ಆಸೆ ಹೊಂದಿದ್ದರೆ ನಿಮಗೊಂದು ಖುಷಿ ಸುದ್ದಿ. ಐ ಆರ್ ಸಿ ಟಿ ಸಿ ಅಂಡಮಾನ್ ಪ್ರವಾಸಕ್ಕೆ ಉತ್ತಮ ಕೊಡುಗೆ ನೀಡ್ತಿದೆ. ಐ ಆರ್ ಸಿ ಟಿ ಸಿ ನಾಲ್ಕು ರಾತ್ರಿ ಹಾಗೂ 5 ದಿನದ ಅಂಡಮಾನ್ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ.

ಐ ಆರ್ ಸಿ ಟಿ ಸಿ ಅಧಿಕೃತ ವೆಬ್ಸೈಟ್ ಪ್ರಕಾರ, ಇಂಡಿಗೊದ ಎಕಾನಮಿ ಕ್ಲಾಸ್ ನಲ್ಲಿ ನೀವು ಕೊಲ್ಕತ್ತಾದಿಂದ ಅಂಡಮಾನ್ ಗೆ ಪ್ರಯಾಣ ಬೆಳೆಸಬಹುದಾಗಿದೆ. ಈ ಪ್ರವಾಸ ಆಗಸ್ಟ್ 15 ರಿಂದ ಶುರುವಾಗಲಿದೆ. ಪ್ರತಿ ವ್ಯಕ್ತಿ 21,120 ರೂಪಾಯಿಯಲ್ಲಿ ಅಂಡಮಾನ್ ಪ್ರವಾಸ ಮುಗಿಸಬಹುದಾಗಿದೆ. ಇದ್ರಲ್ಲಿ ಜಿ ಎಸ್ ಟಿ ಕೂಡ ಸೇರಿದೆ.

ಡಬಲ್ ಆಕ್ಯುಪೆನ್ಸಿಯಲ್ಲಿ ಐ ಆರ್ ಸಿ ಟಿ ಸಿ ಗೆ 21 ಸಾವಿರ ರೂಪಾಯಿ ಹಾಗೂ ಮಗುವಿಗಾಗಿ 19,815 ರೂಪಾಯಿ ನೀಡಬೇಕಾಗುತ್ತದೆ. ಈ ವಿಮಾನ ಕೊಲ್ಕತ್ತಾದಿಂದ ಬೆಳಿಗ್ಗೆ 7.35 ಕ್ಕೆ ಹಾರಾಟ ಶುರು ಮಾಡಲಿದೆ. ಒಂದರಿಂದ 4 ವರ್ಷದ ಮಕ್ಕಳು ಹೊಟೇಲ್ ನಲ್ಲಿ ಪಾಲಕರ ಜೊತೆಗಿರಬಹುದು. ಅದಕ್ಕೆ ಹೆಚ್ಚುವರಿ ಶುಲ್ಕವಿರುವುದಿಲ್ಲ. ಆದ್ರೆ ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರತ್ಯೇಕವಾಗಿ ಫ್ಲೈಟ್ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಐ ಆರ್ ಸಿ ಟಿ ಸಿ ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...