alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿದೆ ವಿಶ್ವದ 8 ನೇ ಅತ್ಯದ್ಭುತ ಬೀಚ್

beach

ಅಂಡಮಾನ್ ನ ಹ್ಯಾವ್ ಲಾಕ್ ದ್ವೀಪದಲ್ಲಿರೋ ರಾಧಾನಗರ ಬೀಚ್ ಪ್ರವಾಸಿಗರ ಪಾಲಿಗೆ ಸ್ವರ್ಗವಿದ್ದಂತೆ. ವಿಶ್ವದ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಈ ಬೀಚ್ ಗೆ ‘ವರ್ಲ್ಡ್ ಟ್ರಾವೆಲರ್ಸ್ ಚಾಯ್ಸ್’ ಪ್ರಶಸ್ತಿ ಕೂಡ ಬಂದಿದೆ. ಜಗತ್ತಿನ ಅತ್ಯಂತ ಸುಂದರ ಬೀಚ್ ಗಳ ಪೈಕಿ ರಾಧಾನಗರ ಬೀಚ್ ಗೆ 8 ನೇ ಸ್ಥಾನ ಸಿಕ್ಕಿದೆ.

ಏಷ್ಯಾದ ಟಾಪ್ ಬೀಚ್ ಗಳಲ್ಲಿ ಇದು ಮೊದಲನೆಯದು. ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾ, ಕೆರಿಬಿಯನ್, ಸೆಂಟ್ರಲ್ ಅಮೆರಿಕ, ಯುರೋಪ್, ದಕ್ಷಿಣ ಅಮೆರಿಕ, ದಕ್ಷಿಣ ಪೆಸಿಫಿಕ್, ಬ್ರಿಟನ್ ಹಾಗೂ ಅಮೆರಿಕದ ಒಟ್ಟು 343 ಬೀಚ್ ಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಟಾಪ್-25 ಬೀಚ್ ಗಳಿಗೆ ಪ್ರಶಸ್ತಿ ದಕ್ಕಿದೆ. ಈ ಪೈಕಿ ರಾಧಾನಗರ ಬೀಚ್ 8 ನೇ ಸ್ಥಾನ ಗಳಿಸಿದೆ.

12 ತಿಂಗಳುಗಳ ಅವಧಿಯಲ್ಲಿ ಈ ಎಲ್ಲಾ ಬೀಚ್ ಗಳ ಬಗ್ಗೆ ಪ್ರವಾಸಿಗರ ಅಭಿಪ್ರಾಯ ಮತ್ತು ರೇಟಿಂಗ್ಸ್ ಆಧಾರದ ಮೇಲೆ ಪ್ರಶಸ್ತಿ ನೀಡಲಾಗಿದೆ. ಬ್ರೆಜಿಲ್ ನ ‘ಬೈಯಾ ಡೋ ಸಾಂಚೋ ಫರ್ನಾಂಡೋ ಡೆ ನರೋನ್ಹಾ’ ಬೀಚ್ ಗೆ ಮೊದಲ ಸ್ಥಾನ ಲಭಿಸಿದೆ. ಏಷ್ಯಾದ ಟಾಪ್ 10 ಬೀಚ್ ಗಳಲ್ಲಿ ರಾಧಾನಗರ ಬೀಚ್ ಮೊದಲ ಸ್ಥಾನ ಗಳಿಸಿದ್ರೆ, ಗೋವಾದ ಅಗೊಂಡಾ ಬೀಚ್ ಗೆ 5 ನೇ ಸ್ಥಾನ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...