alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಮೊದಲ ಕ್ಯಾಶ್ಲೆಸ್ ದೇವಸ್ಥಾನ

ದೇವಸ್ಥಾನಕ್ಕೆ ಹೋದ ಭಕ್ತರು ದೇವರಿಗೆ ಕಾಣಿಕೆ ಹಾಕೋದು ಸಾಮಾನ್ಯ ಸಂಗತಿ. ಕೆಲ ದೇವಸ್ಥಾನಗಳಲ್ಲಿ ಭಕ್ತರು ಕಾಣಿಕೆಯನ್ನು ದೇಣಿಗೆ ಹುಂಡಿಗೆ ಹಾಕೋದಿಲ್ಲ. ಬದಲಾಗಿ ದೇವರ ಮೇಲೆ ನಾಣ್ಯಗಳನ್ನು ಎಸೆಯುತ್ತಾರೆ. ದೇಶದ ವಿವಿಧ ದೇವಸ್ಥಾನಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಆದ್ರೆ ಗುಜರಾತಿನ ದೇವಸ್ಥಾನವೊಂದು ಸಂಪೂರ್ಣ ಕ್ಯಾಶ್ ಲೆಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಆಧುನಿಕ ಯುಗದಲ್ಲಿ ನರೇಂದ್ರ ಮೋದಿ ಕನಸನ್ನು ಗುಜರಾತಿನ ಭರೂಚ್ ನಲ್ಲಿರುವ ದೇವಸ್ಥಾನವೊಂದು ನನಸು ಮಾಡ್ತಿದೆ. ಜನ ವಿಕಾಸ ಹೆಸರಿನ ದೇವಸ್ಥಾನದಲ್ಲಿ ಭಕ್ತರು ಕಾಣಿಕೆ ಹುಂಡಿಗೆ ಹಣವನ್ನು ಹಾಕುವಂತಿಲ್ಲ.ದೇವರಿಗೆ ಕಾಣಿಕೆ ನೀಡ ಬಯಸುವ ಭಕ್ತರು ಅಲ್ಲಿನ ಪೂಜಾರಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ನೇರವಾಗಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬೇಕಾಗುತ್ತದೆ.

ಕಳೆದ ಒಂದು ವರ್ಷದಿಂದ ಈ ದೇವಸ್ಥಾನ ಸಂಪೂರ್ಣ ಕ್ಯಾಶ್ ಲೆಸ್ ಆಗಿದ್ದು, ಪೇಟಿಎಂ ಹಾಗೂ ಭೀಮ್ ಆ್ಯಪ್ ಮೂಲಕವೂ ಹಣ ಸಂದಾಯ ಮಾಡಬಹುದಾಗಿದೆ. ಶಿವಾಜಿ, ರಾಧಾಕೃಷ್ಣ, ದುರ್ಗಾ ಹಾಗೂ ರಾಮಜಾನ್ಹಕಿ ದೇವಸ್ಥಾನವಿದ್ದು, ನಾಲ್ಕು ದೇವರಿಗೂ ಪ್ರತ್ಯೇಕ ಪೇಟಿಎಂ ಸಂಖ್ಯೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...