alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳನ್ನು ಒಂದುಗೂಡಿಸುತ್ತಂತೆ ಈ ಜಲಪಾತ..!

Scene_of_Bhadaiya_Kund

ಪ್ರೇಮಿಗಳಿರಬಹುದು ಅಥವಾ ಗಂಡ, ಹೆಂಡತಿಯೇ ಇರಬಹುದು. ಇಬ್ಬರೂ ಜಗಳ ಆಡುವುದು ಮತ್ತೆ ಒಂದಾಗುವುದು ಹೊಸತೇನಲ್ಲ. ಆದರೆ ಕೆಲವೊಮ್ಮೆ ಇಂತಹ ಸಣ್ಣ ಪುಟ್ಟ ಜಗಳಗಳೇ ವಿಕೋಪಕ್ಕೆ ತಿರುಗಿ ಇನ್ನೇನು ಮತ್ತೆ ಒಂದಾಗಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿಗೆ ಬಂದು ನಿಲ್ಲುತ್ತವೆ. ಅಂತಹ ಪರಿಸ್ಥಿತಿಯನ್ನು, ಅಂತಹ ಪ್ರೇಮಿಗಳು ಅಥವಾ ಗಂಡ, ಹೆಂಡತಿಯನ್ನು ಒಂದು ಜಲಪಾತದ ನೀರು ಒಂದಾಗಿಸುತ್ತದೆ ಎಂದರೆ ನೀವು ನಂಬುತ್ತೀರಾ..?

ನಂಬಲೇಬೇಕು. ಏಕೆಂದರೆ ದಂಪತಿಯ ನಡುವೆ, ಪ್ರೇಮಿಗಳ ನಡುವಿನ ಪ್ರೀತಿಯನ್ನು ಹೆಚ್ಚುವಂತೆ ಮಾಡುವ ಜಲಪಾತ ಮಧ್ಯಪ್ರದೇಶದಲ್ಲಿದೆ. ಇಲ್ಲಿಯ ಶಿವಪುರಿ ಜಿಲ್ಲೆಯ ಭದೈಯಾ ಕುಂಡದಲ್ಲಿ ಸ್ನಾನ ಮಾಡಿದರೆ ದಂಪತಿಯ ನಡುವೆ ಪ್ರೀತಿ ಹುಟ್ಟುತ್ತದೆಯಲ್ಲದೇ ಅವರು ಮುಂದೆಂದೂ ಜಗಳವಾಡುವುದಿಲ್ಲವಂತೆ. ಹಾಗಾಗಿ ಭದೈಯಾ ಕುಂಡದಲ್ಲಿ ಸ್ನಾನ ಮಾಡಲು ಅನೇಕ ಜೋಡಿಗಳು ಮುಗಿಬೀಳುತ್ತಾರೆ.

ಭದೈಯಾ ಕುಂಡದಲ್ಲಿ ದೇವಸ್ಥಾನವೂ ಇದೆ. ಆ ದೇವಸ್ಥಾನದ ಮೇಲ್ಛಾವಣಿಯ ಮೂಲಕವೇ ನೀರು ಹರಿದು ಬಂದು ನಂತರ ಕುಂಡದಲ್ಲಿ ಒಂದಾಗುತ್ತೆ. ಈ ದೇವಸ್ಥಾನ 1500 ವರ್ಷ ಹಳೆಯದು ಎಂದು ಹೇಳಲಾಗುತ್ತೆ. ಗಂಡ, ಹೆಂಡಿರ ಮಧ್ಯೆ ಇರುವ ಭಿನ್ನಾಭಿಪ್ರಾಯ ಎಷ್ಟರಮಟ್ಟಿಗೆ ದೂರವಾಗುತ್ತೋ ಗೊತ್ತಿಲ್ಲ. ಆದರೆ ಸುಂದರ ಪರಿಸರದಲ್ಲಿ ಆ ಕುಂಡದಲ್ಲಿ ಸ್ನಾನ ಮಾಡುವಾಗ ಸಂತಸ ಮೂಡದೇ ಇರಲಾರದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...