alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಸ್ವರ್ಗ ಮಂಜುಗಡ್ಡೆಯಲ್ಲೇ ನಿರ್ಮಿಸಿರುವ ಈ ಹೋಟೆಲ್….

ಚಳಿಗಾಲ ಬಂತು ಅಂದ್ರೆ ಅದೆಷ್ಟೋ  ಸ್ಥಳಗಳು ಮಂಜಿನ ಸ್ವರ್ಗವಾಗಿ ಮಾರ್ಪಡುತ್ತವೆ. ಹಿಮಗಳ ರಾಶಿಯಲ್ಲಿ ಎಂಜಾಯ್ ಮಾಡೋದು ಪ್ರತಿಯೊಬ್ಬರ ಕನಸು. ಸಂಪೂರ್ಣ ಹೆಪ್ಪುಗಟ್ಟಿರೋ ನಯಾಗರ ಜಲಪಾತವನ್ನು ಕಣ್ತುಂಬಿಕೊಳ್ಳಬೇಕು ಎನಿಸುವುದು ಸಹಜ.

ಇದನ್ನೆಲ್ಲಾ ಎಂಜಾಯ್ ಮಾಡಲು ನೀವು ಅಲ್ಲಿಗೇ ಹೋಗಬೇಕೆಂದೇನಿಲ್ಲ. ಯಾಕಂದ್ರೆ ಈಗ ಹೋಟೆಲ್ ಗಳು ಕೂಡ ಹಿಮದಿಂದ್ಲೇ ನಿರ್ಮಾಣವಾಗಿವೆ. ಕೆನಡಾದ ಕ್ಯೂಬೆಕ್ ನಲ್ಲಿರೋ Hotel de Glace ನಿಜಕ್ಕೂ ಅದ್ಭುತ ಅನುಭವ ಉಣಬಡಿಸುತ್ತಿದೆ.

ಈ ಹೋಟೆಲ್ ಸಂಪೂರ್ಣ ಮಂಜುಗಡ್ಡೆಯಿಂದ್ಲೇ ನಿರ್ಮಾಣವಾಗಿದೆ. 1996ರಲ್ಲಿ ಸ್ವೀಡನ್ ನಲ್ಲಿ ಇಂಥದ್ದೇ ಹೋಟೆಲ್ ಇತ್ತು ಅನ್ನೋದನ್ನು ಕೇಳಿದ್ದ ಜೇಕಸ್ ಡೆಸ್ಬೊಯ್ಸ್ ತಾವು ಕೂಡ ಅಂತಹ ಪ್ರಯತ್ನಕ್ಕೆ ಕೈ ಹಾಕಿದ್ರು.

ತಕ್ಷಣವೇ ಸ್ವೀಡನ್ ಗೆ ಹೊರಟು ನಿಂತ ಜೇಕಸ್, ಅಲ್ಲಿ ಹಿಮದ ಹೋಟೆಲ್ ಸಿದ್ಧಪಡಿಸಿದ್ದವರನ್ನು ಭೇಟಿಯಾಗಿ ಸಲಹೆ, ಸೂಚನೆಗಳನ್ನು ಪಡೆದುಕೊಂಡ್ರು. 2001ರಲ್ಲಿ ಅಂತಿಮವಾಗಿ ಕೆನಡಾದಲ್ಲೂ ಹಿಮದ ಹೋಟೆಲ್ ಬಾಗಿಲು ತೆರೆದಿತ್ತು.

ಈ ಹೋಟೆಲ್ ಕಾರ್ಯನಿರ್ವಹಿಸೋದು ಚಳಿಗಾಲದಲ್ಲಿ ಮಾತ್ರ. ಡಿಸೆಂಬರ್ ಆರಂಭದಿಂದ 6 ವಾರಗಳ ಕಾಲ ಇದು ತೆರೆದಿರುತ್ತದೆ. 45 ಕೋಣೆಗಳ ಈ ಮಂಜುಗಡ್ಡೆಯ ಹೋಟೆಲ್ ಅನ್ನು ನೋಡಲು ಎರಡು ಕಣ್ಣು ಸಾಲದು.

ಒಂದು ರಾತ್ರಿ ಇಲ್ಲಿ ಉಳಿದುಕೊಳ್ಳಲು ಕೂಡ ಅವಕಾಶವಿದೆ. ಒಂದು ಮಿಲಿಯನ್ ಗೂ ಅಧಿಕ ಮಂದಿ ಈಗಾಗ್ಲೇ ಇಲ್ಲಿಗೆ ಭೇಟಿ ನೀಡಿದ್ದಾರೆ. ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...