alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರಿಗೆ ದಿ ಬೆಸ್ಟ್ ಐಸ್ ಹೊಟೇಲ್

ದೇಶ ಸುತ್ತಲು ಅನೇಕರು ಇಷ್ಟಪಡ್ತಾರೆ. ಸುತ್ತಾಡಲು ಹೊಸ ಹೊಸ ಜಾಗಗಳ ಹುಡುಕಾಟ ನಡೆಸ್ತಾರೆ. ಬೇಸಿಗೆ ಕಾಲದಲ್ಲಿ ಹಿತವೆನಿಸುವ, ತಂಪಾಗಿರುವ ಜಾಗಕ್ಕೆ ಹೋಗಲು ಬಯಸ್ತಾರೆ. ಪ್ರಯಾಣಕ್ಕೂ ಮೊದಲು ಆ ಪ್ರದೇಶದ ಹೊಟೇಲ್ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಲ್ಲಿ ಹೋದ ಮೇಲೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಮೊದಲೇ ಹೊಟೇಲ್ ಬುಕ್ ಮಾಡಿಕೊಂಡು ಹೋಗುವವರ ಸಂಖ್ಯೆಯೂ ಜಾಸ್ತಿ ಇದೆ.

ಬೇಸಿಗೆಯ ಈ ಬಿಸಿಲ ಝಳದಲ್ಲಿ ತಪ್ಪಿಸಿಕೊಳ್ಳಲು ಬಯಸುವ ನಿಮಗೆ ಐಸ್ ಹೊಟೇಲ್ ಬಗ್ಗೆ ಮಾಹಿತಿ ನೀಡ್ತೇವೆ ಓದಿ. ಈ ಐಸ್ ಹೊಟೇಲ್ ಇರೋದು ಸ್ವೀಡನ್ ನ Jukkasjarvi ನಲ್ಲಿ. ಈ ಅದ್ಭುತ ಹೊಟೇಲ್ ನಲ್ಲಿರಲು ಪ್ರವಾಸಿಗರು ಬೇರೆ ಬೇರೆ ದೇಶಗಳಿಂದ ಬರ್ತಾರೆ. ಇಲ್ಲಿನ ತಾಪಮಾನ ಸುಮಾರು ಮೈನಸ್ 10 ಡಿಗ್ರಿ. ಡಿಸೆಂಬರ್ ನಲ್ಲಿಯೇ ಪ್ರವಾಸಿಗರ ಆಗಮನ ಶುರುವಾಗುತ್ತದೆ. ಟೋರ್ನ್ ನದಿಯುದ್ದಕ್ಕೂ ಐಸ್ ಹೊಟೇಲ್ ಗಳನ್ನು 25 ವರ್ಷಗಳಿಂದ ನಿರ್ಮಾಣ ಮಾಡಲಾಗ್ತಾ ಇದೆ. ಡಿಸೆಂಬರ್ ವೇಳೆಗೆ ಪ್ರವಾಸಿಗರ ಸ್ವಾಗತಕ್ಕೆ ಈ ಹೊಟೇಲ್ ಸಿದ್ಧವಾಗುತ್ತದೆ.

ವಿಶ್ವದ ನೂರು ಕಲಾವಿದರು ಇದನ್ನು ನಿರ್ಮಾಣ ಮಾಡ್ತಾರೆ. ಈ ಹೊಟೇಲ್ ನೋಡಿ ಹೇಗೆ ನಿರ್ಮಾಣ ಮಾಡಿದ್ದಾರೆಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ಗೋಡೆ, ಹಾಸಿಗೆ, ಪಾತ್ರೆಯಿಂದ ಹಿಡಿದು ಇಲ್ಲಿ ಎಲ್ಲವೂ ಐಸ್ ನಲ್ಲಿ ಮಾಡಲಾಗಿದೆ. 60 ವಿಭಿನ್ನ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಏಪ್ರಿಲ್ ಕೊನೆಯವರೆಗೆ ಇಲ್ಲಿಗೆ ಪ್ರವಾಸಿಗರು ಹೋಗಬಹುದು. ನಂತ್ರ ಐಸ್ ನೀರಾಗಿ ನದಿ ಸೇರುತ್ತದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...