alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶನ ಕತ್ತರಿಸಿದ ರುಂಡ ಇಲ್ಲಿದೆಯಂತೆ !

l_human-headಉತ್ತರಾಖಂಡದ ಪಿಥೌರಾಗಢದಲ್ಲಿರುವ ಪಾತಾಳ ಭುವನೇಶ್ವರ ಗುಹೆಯಲ್ಲಿ ಶಿವ ಕತ್ತರಿಸಿದ ಗಣೇಶನ ತಲೆ ಇದೆಯೆಂದು ಹೇಳಲಾಗುತ್ತದೆ. ಈ ಗುಹೆ ಸುಮಾರು 90 ಅಡಿ ಆಳವಿದೆ.

ಈ ಗುಹೆ ಉತ್ತರಾಖಂಡದ ಗಡಿಯಲ್ಲಿರುವ ಗಂಗೋಲಿಹಾಟ್ ನಲ್ಲಿದೆ. ಈ ಗುಹೆಯಲ್ಲಿ ಗಣೇಶನ ರುಂಡದ ಶಿಲಾಮೂರ್ತಿ ಇದೆ. ಗಣೇಶನ ರುಂಡದ ಮೂರ್ತಿಯ ಮೇಲೆ 108 ದಳದ ಬ್ರಹ್ಮ ಕಮಲವಿದೆ. ಆ ಶಿವನೇ ಪುತ್ರ ಗಣೇಶನಿಗಾಗಿ ಈ ಕಮಲವನ್ನು ಇಟ್ಟಿದ್ದಾನೆ ಎಂಬ ನಂಬಿಕೆ ಇದೆ. ಇಲ್ಲಿ ಶಂಕರಾಚಾರ್ಯರು ಸ್ಥಾಪಿಸಿರುವ ತಾಮ್ರದ ಶಿವಲಿಂಗವೂ ಇದೆ.

ಈ ಗುಹೆಯಲ್ಲಿ ನಾಲ್ಕು ಯುಗಗಳನ್ನು ಸೂಚಿಸುವ ಕಲ್ಲು ಇದೆಯಂತೆ. ಇದರಲ್ಲಿ ಒಂದು ಕಲ್ಲು ಮಾತ್ರ ಬೆಳೆಯುತ್ತಿದೆ. ಇದನ್ನು ಕಲಿಯುಗ ಎಂದು ನಂಬಲಾಗುತ್ತದೆ. ಈ ಕಲ್ಲು ಯಾವಾಗ ಗೋಡೆಯನ್ನು ತಲುಪುವುದೋ ಅಂದು ಕಲಿಯುಗದ ಅಂತ್ಯವಾಗುತ್ತದೆಯಂತೆ.

ಶಿವ ಕೋಪದಲ್ಲಿ ಕತ್ತರಿಸಿದ ಗಣೇಶನ ರುಂಡವನ್ನು ನೋಡಲು ಇಲ್ಲಿ ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಲೇ ಇರುತ್ತಾರೆ. ಇಲ್ಲಿ ಶಿವನ ಜಟೆಯನ್ನು ಬಿಂಬಿಸುವಂತ ಕಲ್ಲುಗಳೂ ಇವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...