alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲಿಕಾಪ್ಟರ್ ಮೂಲಕ ಕಣ್ತುಂಬಿಕೊಳ್ಳಿ ಹಂಪಿ ವೈಭವ

hampiಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಆರಂಭವಾಗಿರುವ ‘ಹಂಪಿ ಉತ್ಸವ’ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಹಂಪೆಯ ವೈಭವವನ್ನು ಕಣ್ತುಂಬಿಕೊಳ್ಳಲು ಆರಂಭಿಸಲಾಗಿದ್ದ ಹೆಲಿಕಾಪ್ಟರ್ ಪ್ರವಾಸ, ನವೆಂಬರ್ 1 ರಿಂದ ನವೆಂಬರ್ 9 ರವರೆಗೆ ನಡೆಯಲಿದೆ.

ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಬಳಿಯಿರುವ ಹೆಲಿಪ್ಯಾಡ್ ನಿಂದ ಬೆಳಿಗ್ಗೆ 8-30 ರಿಂದ ಸಂಜೆ 5-30 ರ ವರೆಗೆ ಹಾರಾಟ ನಡೆಸಲಿರುವ ಎರಡು ಹೆಲಿಕಾಪ್ಟರ್ ಗಳು ಹಂಪೆಯ ವೈಭವವನ್ನು ಪ್ರವಾಸಿಗರಿಗೆ ಕಟ್ಟಿಕೊಡಲಿವೆ.

7 ನಿಮಿಷದ ಸಂಚಾರಕ್ಕೆ 1,900 ರೂ. ನಿಗದಿಪಡಿಸಲಾಗಿದ್ದರೆ 10 ನಿಮಿಷದ ಪ್ರವಾಸಕ್ಕೆ 2,600 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಹಂಪೆಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಹೆಲಿಕಾಪ್ಟರ್ ಗಳು ತೀರಾ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿರುವುದು ಹಲವರ ಆಕ್ಷೇಪಕ್ಕೆ ಕಾರಣವಾಗಿರುವ ಮಧ್ಯೆಯೂ  ‘Hampi By Sky’ ಯೋಜನೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...