alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಹಳಿಗೆ ಮರಳಿದ ಗೋಲ್ಡನ್ ಚಾರಿಯೆಟ್ ಟ್ರೈನ್

ಕೊನೆಗೂ ಗೋಲ್ಡನ್ ಚಾರಿಯೆಟ್ ಅನ್ನೋ ಐಶಾರಾಮಿ ರೈಲು ದಕ್ಷಿಣ ಭಾರತದಲ್ಲಿ ಓಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ತನ್ನ 10 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ಮತ್ತೆ ಪುನಾರಂಭಗೊಳ್ಳಲಿದೆ.

ಈ ರೈಲಿಗಾಗಿ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮಾಡಿದ್ದ ಮನವಿಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. 2008 ರಲ್ಲಿಯೇ ಐಷಾರಾಮಿ ರೈಲು ಓಡಾಟ ಆರಂಭಿಸಿದ್ದರೂ ನಷ್ಟದ ಹಿನ್ನೆಲೆಯಲ್ಲಿ ಓಡಾಟ ಬಂದ್ ಆಗಿತ್ತು.

ಇದೀಗ 56:44 ಅನುಪಾತದ ಆದಾಯ ಹಂಚಿಕೆ ಅಂದರೆ, ಶೇ.56 ರಷ್ಟು ರೈಲ್ವೆ ಇಲಾಖೆಗೆ ಹಾಗೂ ಶೇ.44 ರಷ್ಟು ಆದಾಯ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಎನ್ನುವ ಒಪ್ಪಂದದ ಮೇಲೆ ರೈಲ್ವೆ ಇಲಾಖೆ ಗೋಲ್ಡನ್ ಚಾರಿಯೆಟ್ ರೈಲು ಓಡಾಟಕ್ಕೆ ಅನುಮತಿ ನೀಡಿದೆ.

ಜೊತೆಗೆ ಈ ಬಾರಿ ಸಾಗಣೆ ಶುಲ್ಕ ಮುಕ್ತವಾಗಿರುವುದು ರಾಜ್ಯ ಸರ್ಕಾರಕ್ಕೆ ಇನ್ನಷ್ಟು ಲಾಭದಾಯಕವಾಗುವ ನಿರೀಕ್ಷೆಯಿದೆ. ಮುಂದಿನ 2 ವರ್ಷಗಳಲ್ಲಿ ನಿರೀಕ್ಷೆಯ ಅರ್ಧದಷ್ಟು ಆದಾಯ ಬಂದಲ್ಲಿ ಟ್ರಿಪ್ ಸಂಖ್ಯೆಯನ್ನು 10 ರಿಂದ 20 ಕ್ಕೆ ಏರಿಸಲಾಗುವುದು ಹಾಗೂ ಇದರಿಂದ ರಾಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...