alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಸ್ಟ್ ಹನಿಮೂನ್ ಸ್ಪಾಟ್ ಯಾವುದು ಗೊತ್ತಾ..?

kerala

ಹನಿಮೂನ್ ಅಂದ್ರೇನೆ ಸ್ಪೆಷಲ್. ಹಾಗಾಗಿ ಸುಂದರ ಜಾಗಕ್ಕೆ ಹೋಗಬೇಕು ಅನ್ನೋ ಆಸೆ ನವದಂಪತಿಗಳಿಗೆ. ಭಾರತದಲ್ಲಿ ಬೆಸ್ಟ್ ಹನಿಮೂನ್ ಸ್ಪಾಟ್ ಯಾವುದು ಗೊತ್ತಾ? ಕೇರಳ. ಟ್ರಾವೆಲ್ ವೆಬ್ ಸೈಟ್ ಒಂದು ಜನರ ಅಭಿಪ್ರಾಯ ಸಂಗ್ರಹಿಸಿದ್ದು, ಅತಿ ಹೆಚ್ಚು ಜನ ಕೇರಳವೇ ಬೆಸ್ಟ್ ಅಂತಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಕೃತಿ ಸೌಂದರ್ಯಕ್ಕೆ ಮತ್ತೊಂದು ಹೆಸರೇ ಕೇರಳ. ಇಲ್ಲಿನ ವಾತಾವರಣ, ಆಚಾರ ವಿಚಾರ, ಆಹಾರ ಪದ್ಧತಿ ಎಲ್ಲವೂ ವಿಭಿನ್ನವಾಗಿದೆ, ಹಾಗಾಗಿ ಕೇರಳ ಭಾರತೀಯರನ್ನು ಮಾತ್ರವಲ್ಲ ವಿದೇಶೀ ಜೋಡಿಗಳನ್ನು ಕೂಡ ಸೆಳೆಯುತ್ತಿದೆ.

ಪ್ರವಾಸಿಗರಿಗೆ ಇಷ್ಟವಾಗುವಂತಹ ತಾಣಗಳು, ಯುವಜೋಡಿ ಕಣ್ತುಂಬಿಕೊಳ್ಳಬಹುದಾದ ಜಾಗಗಳು ಕೇರಳದಲ್ಲಿವೆ. ಕೇರಳದಲ್ಲಿ ಸುತ್ತಾಡೋದು ನವದಂಪತಿಗಳಿಗೆ ರೊಮ್ಯಾಂಟಿಕ್ ಅನುಭವವೇ ಸರಿ. ಕೇರಳ ಅತ್ಯುತ್ತಮ ಹನಿಮೂನ್ ಸ್ಪಾಟ್ ಎನಿಸಿಕೊಂಡ್ರೆ, ಸಿಂಗಾಪುರ ಪ್ರವಾಸಿಗರು ಭೇಟಿ ನೀಡಬಹುದಾದ ಬೆಸ್ಟ್ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ. ಹಾಂಗ್ ಕಾಂಗ್ ಬೆಸ್ಟ್ ಸಿಟಿ ಹಾಗೂ ಸ್ವಿಡ್ಜರ್ಲೆಂಡ್ ಬೆಸ್ಟ್ ಫ್ಯಾಮಿಲಿ ಡೆಸ್ಟಿನೇಶನ್ ಎನಿಸಿಕೊಂಡಿದೆ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...