alex Certify
ಕನ್ನಡ ದುನಿಯಾ       Mobile App
       

Kannada Duniya

ಗೋವಾ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕಣ್ಗಾವಲು

baga-beach-goa

ಗೋವಾದ ಪ್ರಸಿದ್ದ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕ್ಯಾಮರಾದ ಕಣ್ಗಾವಲು ಇರಲಿದೆ. ಬೀಚ್ ಗಳಲ್ಲಿ ಹೆಚ್ಚಿನ ಸುರಕ್ಷೆತೆ ಒದಗಿಸುವುದಕ್ಕಾಗಿ 3.61 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಹಮ್ಮಿಕೊಂಡಿದ್ದೇವೆಂದು ಪ್ರವಾಸೋದ್ಯಮ ಸಚಿವ ದಿಲೀಪ್ ಪರುಲೇಕರ್ ಹೇಳಿದ್ದಾರೆ.

‘ಸ್ವದೇಶ ದರ್ಶನ’ ಯೋಜನೆಯಡಿ ಗೋವಾ ಟೂರಿಸಂ ಡೆವಲಪ್ಮೆಂಟ್ ಕಾರ್ಪೊರೇಷನ್ ಈ ಯೋಜನೆಗೆ ಕೈ ಹಾಕಿದೆ. ಈ ಯೋಜನೆಯಡಿ ಸಿಸಿ ಟಿವಿ ಕ್ಯಾಮರಾ, ವೈಫೈ ಮುಂತಾದ ಸೌಲಭ್ಯಗಳು ಗೋವಾ ಬೀಚ್ ಗಳಲ್ಲಿ ಇರಲಿದೆ.

ಗೋವಾ ಬೀಚ್ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ತಾಣವಾಗಿದ್ದು, ವರ್ಷಕ್ಕೆ ಸುಮಾರು 4 ಮಿಲಿಯನ್ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಇದರಲ್ಲಿ ಅರ್ಧದಷ್ಟು ಪ್ರವಾಸಿಗರು ವಿದೇಶಿಯರೇ ಆಗಿದ್ದಾರೆ ಎಂದು ಪರುಲೇಕರ್ ಹೇಳಿದ್ದಾರೆ.

ಮೊದಲ ಹಂತದಲ್ಲಿ ಬಾಗಾ, ಕಲಂಗೋಟ್, ಕಾನ್ಡೊಲಿಮ್, ವೆಗೇಟರ್ ಮತ್ತು ಅಂಜುನಾ ಬೀಚ್ ಗಳಲ್ಲಿ ಸಿಸಿ ಟಿವಿ ಅಳವಡಿಸಲಾಗುತ್ತದೆ ಎಂದು ಪರುಲೇಕರ್ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...