alex Certify ಪವಿತ್ರ ಯಾತ್ರಾ ಸ್ಥಳ ‘ಬೋಧಗಯಾ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪವಿತ್ರ ಯಾತ್ರಾ ಸ್ಥಳ ‘ಬೋಧಗಯಾ’

ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ, ಗಯಾ, ಬೋಧಗಯಾ ಹಿಂದೂ ಮತ್ತು ಬೌದ್ಧರ ಯಾತ್ರಾ ಸ್ಥಳವಾಗಿವೆ.

ಫಲ್ಗು ನದಿಯ ದಡದಲ್ಲಿರುವ ಈ ಸ್ಥಳದ ಸುತ್ತಲೂ ಬೆಟ್ಟ ಗುಡ್ಡಗಳು ಆವೃತವಾಗಿವೆ. ಪ್ರಾಕೃತಿಕ ಸೌಂದರ್ಯ ಮತ್ತು ಶಿಲ್ಪಕಲೆಗೆ ಹೆಸರಾದ ಗಯಾ ನೋಡುಗರ ಮನದಲ್ಲಿ ಉಳಿಯುವಂತಹ ಸ್ಥಳವಾಗಿದೆ.

ದೇವಾಲಯ, ಪರ್ವತಗಳು, ಕೆರೆಗಳು, ಬೋಧಗಯಾ ಮೊದಲಾದವು ಈ ಸ್ಥಳಕ್ಕೆ ಮೆರುಗು ತಂದಿವೆ.

ರಾಣಿ ಅಹಲ್ಯಾಬಾಯಿ ಹೋಳ್ಕರ್ 1787 ರಲ್ಲಿ ಕಟ್ಟಿಸಿದ ವಿಷ್ಣು ದೇವಾಲಯ ಆಕರ್ಷಕವಾಗಿದೆ. ಸಮೀಪದಲ್ಲಿನ ಸೂರ್ಯ ಕುಂಡ್, ಸೀತಾ ಕುಂಡ್ ಸರೋವರಗಳು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಪಡೆದುಕೊಂಡಿದೆ.

ನಗರದಿಂದ 1 ಕಿಲೋ ಮೀಟರ್ ದೂರದಲ್ಲಿರುವ ಬ್ರಹ್ಮ ಪರ್ವತದಲ್ಲಿ ಅಶೋಕ ಚಕ್ರವರ್ತಿ ಬೌದ್ಧ ಸ್ತೂಪ ನಿರ್ಮಿಸಿದ್ದ. ಇಲ್ಲಿನ ಬ್ರಹ್ಮಕುಂಡ್ ಸರೋವರದಲ್ಲಿ ಪಿತೃಗಳಿಗೆ ತರ್ಪಣ ಕೊಡಲಾಗುತ್ತದೆ.

ಬೋಧಗಯಾ ಗಯಾದಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿದ್ದು, ಈ ಸ್ಥಳದಲ್ಲಿ ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಜ್ಞಾನೋದಯವಾಗಿತ್ತು ಎನ್ನಲಾಗಿದೆ.

ಮಹಾಬೋಧಿ ಮಂದಿರ ಪ್ರಮುಖ ಸ್ಥಳವಾಗಿದೆ. ಕ್ರಿ.ಪೂ. 3 ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ದೇವಾಲಯದ ಶಿಲ್ಪಕಲೆ ಅದ್ಭುತವಾಗಿದ್ದು, ಇಲ್ಲಿರುವ ಬೃಹತ್ ಬುದ್ಧನ ಭವ್ಯ ಪ್ರತಿಮೆಯನ್ನು ಕಣ್ತುಂಬಿಕೊಳ್ಳಬಹುದು. ಸಮೀಪದಲ್ಲೇ ಬೋಧಿ ಸರೋವರ ಇದೆ.

ಗಯಾ ಮತ್ತು ಬೋಧಗಯಾದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಡಬಹುದಾದ ಅನೇಕ ಸ್ಥಳಗಳಿವೆ. ವಾಹನಗಳ ವ್ಯವಸ್ಥೆ ಇದೆ. ಧರ್ಮಶಾಲೆ, ಅತಿಥಿ ಗೃಹಗಳು ಕೂಡ ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...