alex Certify
ಕನ್ನಡ ದುನಿಯಾ       Mobile App
       

Kannada Duniya

ಚೆಲುವಿನ ಚೇಲಾವರ ಜಲಪಾತ

waves waterಕೊಡಗಿಗೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆ ಜಲಪಾತಗಳು. ಇಲ್ಲಿ ಸುರಿಯುವ ಅಧಿಕ ಮಳೆಯಿಂದ ತುಂಬಿ ಹಾಲ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕುತ್ತಿರುವ ಜಲಪಾತಗಳನ್ನು ನೋಡುವುದೇ ರೋಮಾಂಚನ.

ಕೊಡಗಿನಲ್ಲಿರುವ ಅಸಂಖ್ಯಾತ ಜಲಪಾತಗಳು ಗಿರಿ ಕಂದರಗಳ ನಡುವಿನಿಂದ ಧಾರೆಯಾಗಿ ಧುಮ್ಮಿಕ್ಕಿ ಭೋರ್ಗರೆಯುತ್ತ ಸಾಗುತ್ತಿದ್ದರೆ, ಇದಕ್ಕೆ ಮನ ಸೋಲದವರಿಲ್ಲ. ಬಳುಕುವ ವಯ್ಯಾರದಿಂದ ತನ್ನದೇ ಆದ ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಲಪಾತಗಳ ಪೈಕಿ ಚೇಲಾವರ ಜಲಪಾತವೂ ಒಂದು. ಸುಮಾರು 80 ಅಡಿ ಅಗಲ ಹಾಗೂ 100 ಅಡಿ ಎತ್ತರದಿಂದ ಧುಮುಕುವ ಈ ಜಲಪಾತ ನೋಡುಗರಿಗೆ ಆನಂದ ನೀಡುತ್ತದೆ.

ಚೆಯ್ಯಂಡಾಣೆ ಮುಖ್ಯ ರಸ್ತೆಯಿಂದ 5 ಕಿ.ಮೀ. ದೂರದ ಚೇಲಾವರ ಗ್ರಾಮದಲ್ಲಿ ತನ್ನದೇ ಆದ ವೈಶಿಷ್ಟ್ಯದಿಂದ ಸಾಗುವ ಈ ಜಲಪಾತದ ಸ್ಥಳಕ್ಕೆ ಚೆಯ್ಯಂಡಾಣೆಯಿಂದ ವಾಹನಗಳಲ್ಲಿ ಕ್ರಮಿಸಬಹುದು. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಚೆಯ್ಯಂಡಾಣೆ ಗ್ರಾಮಕ್ಕೆ 40 ಕಿ.ಮಿ. ದೂರವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...