alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಂ ಸ್ಟೇ ಅಲ್ಲ! ಮುಂಬೈನಲ್ಲಿ ಆರಂಭವಾಗ್ತಿದೆ ಸ್ಲಂ ಸ್ಟೇ!!

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮನೆಯ ವಾತಾವರಣ ಕಲ್ಪಿಸಲು ಹೋಂ ಸ್ಟೇ ಆರಂಭಿಸಿರುವುದನ್ನು ಕೇಳಿದ್ದೀರಿ. ಆದರೆ ಮುಂಬೈನಲ್ಲಿ ವಿಭಿನ್ನ ಪ್ರಯತ್ನವೊಂದನ್ನು ಕೈಗೊಳ್ಳಲಾಗಿದ್ದು, ಪ್ರವಾಸಿಗರು ಸ್ಲಂ ಅನುಭವ ಪಡೆಯಲು ಈಗ ಸ್ಲಂ ಸ್ಟೇ ಆರಂಭಿಸಲಾಗುತ್ತಿದೆ.

ಮುಂಬೈನ ಮತ್ತೊಂದು ಮುಖವನ್ನು ಪರಿಚಯಿಸಲು ಈ ಸ್ಲಂ ಸ್ಟೇ ಆರಂಭಿಸಲಾಗುತ್ತಿದ್ದು, ಸ್ಲಂ ನಲ್ಲಿ ಅಥಿಗಳಿಗೆ ಕಿರಿದಾದ ಕೋಣೆಯನ್ನು ನೀಡಲಾಗುತ್ತದೆಯಲ್ಲದೆ, ಹೊಸ ಹಾಸಿಗೆ, ಫ್ಲಾಟ್ ಸ್ಕ್ರೀನ್ ಟಿ.ವಿ. ಮತ್ತು ಏರ್ ಕಂಡೀಷನರ್ ಸೌಲಭ್ಯ ಇದರಲ್ಲಿ ಇರಲಿದೆ. ಶೌಚಾಲಯ ಮಾತ್ರ ಆ ಮನೆಯ ಎಲ್ಲ ಸದಸ್ಯರು ಬಳಸುವುದನ್ನೇ ಬಳಸಬೇಕಿದ್ದು, ದಿನವೊಂದಕ್ಕೆ 2000 ರೂ. ನಿಗದಿಪಡಿಸಲಾಗಿದೆ.

ಅತಿಥಿಗಳು ಬಯಸಿದಲ್ಲಿ ಸ್ಲಂ ಸ್ಟೇ ಮನೆಯ ಮಾಲೀಕರೊಂದಿಗೆ ಅವರ ಮನೆಯ ಊಟೋಪಚಾರ ಸವಿಯಬಹುದಾದರೂ ಅದು ಕಡ್ಡಾಯವಲ್ಲ. ಹತ್ತಿರದ ಹೋಟೆಲ್ ಗಳಿಗೂ ಹೋಗಬಹುದಾಗಿದೆ.

ಸ್ಲಂ ಸ್ಟೇ ಆರಂಭಕ್ಕೆ ಭಾರತೀಯರಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೆಲ ವಿದೇಶಿಗರು ಈಗಲೂ ಭಾರತವೆಂದರೆ ಹಾವಾಡಿಗರ ದೇಶವೆಂದು ಭಾವಿಸುತ್ತಾರೆ. ಈಗ ಸ್ಲಂ ಸ್ಟೇ ಆರಂಭಿಸಿದರೆ ಅವರುಗಳು ಭಾರತ ಹೀಗೇ ಇದೆ ಎಂದು ಭಾವಿಸುತ್ತಾರೆ. ಹೀಗಾಗಿ ಈ ಪ್ರಯತ್ನವನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...