alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿಗೆ ಪ್ರವಾಸ ಕೈಗೊಳ್ಳುವ ಮುನ್ನ ಒಮ್ಮೆ ಯೋಚಿಸಿ

2016_12image_20_14_078768950dangerousplaces5-ll

ರಜೆ ಶುರುವಾಗುವ ಮುನ್ನವೇ ಜನರು ಪ್ರವಾಸದ ಪ್ಲಾನ್ ಮಾಡ್ತಾರೆ. ರಜೆಯನ್ನು ಎಂಜಾಯ್ ಮಾಡಲು ಪ್ರವಾಸಕ್ಕೆ ಹೋಗ್ತಾರೆ. ಅನೇಕ ಪ್ರವಾಸಿ ಸ್ಥಳಗಳಿಗೆ ಹೋದ್ರೆ ಜನರು ರಿಫ್ರೆಶ್ ಆಗ್ತಾರೆ. ಹಾಗೆ ಕೆಲವು ಸ್ಥಳಗಳಿಗೆ ಹೋದ್ರೆ ಅಪಾಯ ನಿಶ್ಚಿತ. ಪ್ರವಾಸಕ್ಕೆ ಪ್ಲಾನ್ ಮಾಡುವ ಮುನ್ನ ಜೀವಕ್ಕೆ ಆಪತ್ತು ತರಬಹುದಂತ ಪ್ರದೇಶಗಳ ಬಗ್ಗೆ ತಿಳಿದುಕೊಳ್ಳಿ. ಅಲ್ಲಿಗೆ ಎಂದೂ ಹೋಗುವ ಪ್ರಯತ್ನ ಮಾಡಬೇಡಿ.

ಆಸ್ಟ್ರೇಲಿಯಾದ ಮರುಭೂಮಿ : ಈ ಸ್ಥಳಕ್ಕೆ ಯಾರೂ ಹೋಗುವುದಿಲ್ಲ. ಇಲ್ಲಿ ವಾಸ ಮಾಡೋದು ಬಹಳ ಕಷ್ಟ. ಇಲ್ಲಿ ತುಂಬಾ ಬಿಸಿಲಿರುವ ಕಾರಣ ಇಲ್ಲಿ ವಾಸ ಮಾಡೋದು ಸಾಧ್ಯವಿಲ್ಲ. ಇದರ ಜೊತೆಗೆ ಅಪಾಯಕಾರಿ ಹಾಗೂ ವಿಷಕಾರಿ ಜೀವಿಗಳು ನಿಮ್ಮ ಮೇಲೆ ಯಾವಾಗ ಬೇಕಾದ್ರೂ ದಾಳಿ ಮಾಡಬಹುದು.

ಸಿಯುಡಾಡ್ ಜುವಾರೆಝ್, ಮೆಕ್ಸಿಕೋ : ಇಲ್ಲಿನ ಜನರು ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಮಹಿಳೆಯರನ್ನು ಗುಲಾಮರಾಗಿ ಮಾಡಿಕೊಳ್ಳುತ್ತಾರೆ. ಅತ್ಯಾಚಾರದ ಪ್ರಕರಣ ಇಲ್ಲಿ ಜಾಸ್ತಿ.

ಇಂಡೋನೇಷ್ಯಾ  ಸುಮಾತ್ರಾ : ಇಲ್ಲಿ ವಾಸಿಸುವವರು ಜೀವವನ್ನು ಕೈನಲ್ಲಿ ಹಿಡಿದು ಬದುಕಬೇಕು. ಯಾವಾಗ ಬೇಕಾದ್ರೂ ಅಪಾಯಕಾರಿ ಭೂಕಂಪ ಹಾಗೂ ಚಂಡಮಾರುತ ಜನರ ಜೀವವನ್ನು ಬಲಿ ಪಡೆಯಬಹುದು.

ಇಸ್ತಾಂಬುಲ್ : ಇಲ್ಲಿ ಕೂಡ ಪ್ರಕೃತಿಯ ಆಟ ಜೋರಾಗಿದೆ. ಭೂಕಂಪ ಜನರ ಬಲಿಗೆ ಕಾದಿರುತ್ತದೆ.

ಕ್ಯಾರಕಾಸ್, ವೆನಿಜುವೆಲಾ : ಅತಿ ಹೆಚ್ಚು ಅಪರಾಧವಾಗುವ ಪ್ರದೇಶವಿದು. ಇಲ್ಲಿ ಅಪಹರಣ ಪ್ರಕರಣಗಳ ಸಂಖ್ಯೆ ಹೆಚ್ಚು.

ಈಸ್ಟ್ ಸೇಂಟ್ ಲೂಯಿಸ್, ಅಮೆರಿಕಾ : ಇಲ್ಲಿ ಹತ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚು. ವಿಶ್ವದ ಅತಿ ಹೆಚ್ಚು ಹಿಂಸಾಚಾರ ನಡೆಯುವ ಸ್ಥಳಗಳ ಪಟ್ಟಿಯಲ್ಲಿ ಇದು ಮೊದಲಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...