alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀನಿವಾಸ ಸಾಗರದಲ್ಲಿ ಜಲಧಾರೆಯ ವೈಭವ

ರಾಜ್ಯದ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬರದ ನಾಡಿನಲ್ಲೂ ಕೆರೆ ಕಟ್ಟೆಗಳು ತುಂಬಿವೆ. ಅನೇಕ ವರ್ಷಗಳಿಂದ ತುಂಬದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ.

ಚಿಕ್ಕಬಳ್ಳಾಪುರ ಶ್ರೀನಿವಾಸ ಸಾಗರ ಡ್ಯಾಂ ಕೂಡ ಭರ್ತಿಯಾಗಿದೆ. ಜಕ್ಕಲಮಡುಗು ಎಂದೇ ಕರೆಯಲ್ಪಡುವ ಈ ಜಲಾಶಯ ಭರ್ತಿಯಾಗಿ ಮೇಲಿನಿಂದ ನೀರು ಧುಮ್ಮಿಕ್ಕುವ ದೃಶ್ಯ ನಯನ ಮನೋಹರವಾಗಿದ್ದು, ಪ್ರವಾಸಿಗರು, ಸುತ್ತಮುತ್ತಲಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ನೀರೊದಗಿಸುವ ಈ ಜಲಾಶಯ ಇತ್ತೀಚಿನ ವರ್ಷಗಳಲ್ಲಿ ಭರ್ತಿಯಾಗಿರಲಿಲ್ಲ. ಈ ಬಾರಿ ಸಾಕೆನಿವಷ್ಟು ಮಳೆಯಾಗಿರುವುದರಿಂದ ಜಕ್ಕಲಮಡು ಡ್ಯಾಂ ಜಲಾಶಯ ಭರ್ತಿಯಾಗಿದ್ದು, ತುಂಬಿ ಹರಿಯುತ್ತಿದೆ. ಸುಮಾರು 50 ಅಡಿ ಮೇಲಿನಿಂದ ನೀರು ಬೀಳುತ್ತಿದ್ದು, ಪ್ರವಾಸಿಗರು ನೋಡಲು ಮುಗಿಬಿದ್ದಿದ್ದಾರೆ.

ಇನ್ನು ನೀರು ಧುಮ್ಮಿಕ್ಕುವ ಸಂದರ್ಭದಲ್ಲಿ ಮೀನುಗಳು ಕೂಡ ಬೀಳುತ್ತಿದ್ದು, ಕೆಲವರು ಬಲೆ, ಬಟ್ಟೆಗಳ ಸಹಾಯದಿಂದ ನೀರಿನೊಂದಿಗೆ ಬೀಳುವ ಮೀನುಗಳನ್ನು ಹಿಡಿಯಲು ಮುಂದಾಗಿದ್ದಾರೆ. ರಭಸದಿಂದ ಬೀಳುವ ನೀರಿನೊಂದಿಗೆ ಬೀಳುವ ಮೀನು ಹಿಡಿಯುವ ಜೊತೆಗೆ ನೀರಿನಲ್ಲಿ ಮಿಂದೆದ್ದು, ಮೈ ಮನ ಹಗುರಾಗಿಸಿಕೊಳ್ಳುತ್ತಿದ್ದಾರೆ.

ಜಲಪಾತದ ರೀತಿಯಲ್ಲಿ ನೀರು ಭೋರ್ಗರೆಯುತ್ತಿದ್ದು, ಮಳೆರಾಯನ ಈ ಉಡುಗೊರೆ ರೂಪದ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ. ನೀವೂ ಒಮ್ಮೆ ಶ್ರೀನಿವಾಸ ಸಾಗರ ಜಲಧಾರೆಯ ವೈಭವ ಕಣ್ತುಂಬಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...