alex Certify
ಕನ್ನಡ ದುನಿಯಾ       Mobile App
       

Kannada Duniya

ತಾಜ್ ಮಹಲ್ ವೀಕ್ಷಣೆಗೆ ಸಮಯ ನಿಗದಿ

ವಿಶ್ವದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ದೇಶದ ಹೆಮ್ಮೆಯ ತಾಜ್ ಮಹಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ನರೇಂದ್ರ ಮೋದಿ ಸರ್ಕಾರ ಪ್ರವಾಸಿಗರ ಸಂಖ್ಯೆ ನಿಯಂತ್ರಿಸಲು ಹೊಸ ಪ್ಲಾನ್ ಮಾಡುತ್ತಿದೆ. ಎಎಸ್ಐ ನೀಡಿದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಡಿಸೆಂಬರ್ 28 ತಾಜ್ ಮಹಲ್ ವೀಕ್ಷಣೆ ಸಮಯ ಮುಗಿಯುವ ಕೆಲ ನಿಮಿಷದ ಹಿಂದೆ ಒಂದು ದ್ವಾರದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಇದ್ರಿಂದ ಕೆಲ ಪ್ರವಾಸಿಗರು ಗಾಯಗೊಂಡಿದ್ದರು. ಘಟನೆ ನಂತ್ರ ಜನವರಿ 1ರಂದು ಎಎಸ್ಐ ತಂಡ ತಾಜ್ ಮಹಲ್ ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿತ್ತು. ನಂತ್ರ ಸಂಸ್ಕೃತಿ ಸಚಿವಾಲಯಕ್ಕೆ ವರದಿ ನೀಡಿತ್ತು.

ಪುರಾತತ್ವ ಇಲಾಖೆ ಪ್ರಕಾರ, ತಾಜ್ ಮಹಲ್ ಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾನ್ಯ ದಿನಗಳಲ್ಲಿ 3500-40,000 ಪ್ರವಾಸಿಗರು ತಾಜ್ ಮಹಲ್ ಗೆ ಬರ್ತಾರೆ. ರಜಾ ದಿನಗಳಲ್ಲಿ ಈ ಸಂಖ್ಯೆ 70 ಸಾವಿರ ತಲುಪುತ್ತದೆ. ಪ್ರವಾಸಿಗರನ್ನು ನಿಯಂತ್ರಿಸುವುದು ಸ್ಥಳೀಯ ಆಡಳಿತಕ್ಕೆ ಕಷ್ಟದ ಕೆಲಸವಾಗಿದೆ.

ಸದ್ಯ ದಿನವೊಂದಕ್ಕೆ ಎಷ್ಟು ಪ್ರವಾಸಿಗರು ತಾಜ್ ಮಹಲ್ ಭೇಟಿ ನೀಡಬೇಕೆನ್ನುವ ಬಗ್ಗೆ ಯಾವುದೇ ನಿಯಮವಿಲ್ಲ. ಜತೆಗೆ ಒಮ್ಮೆ ಒಳ ಹೋದವರು ಎಷ್ಟು ಸಮಯ ಬೇಕಾದ್ರೂ ಒಳಗೆ ಇರಬಹುದು. ಆದ್ರೆ ಈ ನಿಯಮ ಇನ್ಮುಂದೆ ಬದಲಾಗಲಿದೆ. ಕೇವಲ 40 ಸಾವಿರ ಪ್ರವಾಸಿಗರಿಗೆ ಮಾತ್ರ ಪ್ರತಿದಿನ ತಾಜ್ ಮಹಲ್ ಭೇಟಿಗೆ ಅವಕಾಶ ಸಿಗಲಿದೆ. ಜೊತೆಗೆ ಒಳ ಹೋದ ಪ್ರವಾಸಿಗರು 3 ಗಂಟೆ ಮಾತ್ರ ತಾಜ್ ಮಹಲ್ ವೀಕ್ಷಣೆ ಮಾಡಬಹುದಾಗಿದೆ. ಎಎಸ್ಐ ನೀಡಿದ ಈ ಪ್ರಸ್ತಾವನೆಯನ್ನು ಕೇಂದ್ರ ಒಪ್ಪಿಕೊಂಡಿದೆ. ಜೊತೆಗೆ ಪ್ರವಾಸಿಗರ ನಿಯಂತ್ರಣಕ್ಕೆ ಹಾಗೂ ಅನಾಹುತವಾಗದಂತೆ ತಡೆಯಲು ಕೆಲವೊಂದು ಮಹತ್ವದ ಕ್ರಮ ಕೈಗೊಳ್ಳಲಾಗುವುದೆಂದು ಎಎಸ್ಐ ಅಧಿಕಾರಿಗಳು ತಿಳಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...