alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಲಕುಪ್ಪೆಯ ಗೋಲ್ಡನ್ ಟೆಂಪಲ್

ದಕ್ಷಿಣ ಭಾರತದಲ್ಲಿ ಟಿಬಿಟಿಯನ್ ಬೌದ್ಧಪಂಥದ ಕೇಂದ್ರವಾಗಿರುವ ಬೈಲಕುಪ್ಪೆಯ ಸ್ವರ್ಣಮಂದಿರ ನಯನ ಮನೋಹರವಾಗಿದೆ. ಮೈಸೂರು ಜಿಲ್ಲೆಯ ಪಶ್ಚಿಮಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದ ಸಮೀಪದಲ್ಲಿ ಬೈಲಕುಪ್ಪೆ ಇದ್ದು, ಟಿಬೆಟ್ ನಿರಾಶ್ರಿತರು ನೆಲೆಸಿದ್ದಾರೆ.

ಇಲ್ಲಿ ಭಿಕ್ಷುಗಳ ಮಠ, ದೇವಾಲಯಗಳು ಇದ್ದು ಅವುಗಳಲ್ಲಿ ಬೌದ್ಧ ಭಿಕ್ಷುಗಳ ಶಿಕ್ಷಣ ಸಂಸ್ಥೆ, ಸುವರ್ಣ ಮಂದಿರ ಪ್ರಮುಖವಾಗಿವೆ. ಸುವರ್ಣ ಮಂದಿರದೊಳಗೆ ಕಾಲಿಡುತ್ತಿದ್ದಂತೆ ವಿಶಿಷ್ಟ ಅನುಭವವಾಗುತ್ತದೆ. ಸುದ್ದುಗದ್ದಲದ ನಡುವಿನಿಂದ ಪ್ರಶಾಂತ ಸ್ಥಳಕ್ಕೆ ಪ್ರವೇಶಿಸಿದಂತಾಗುತ್ತದೆ.

ಪದ್ಮ ಸಂಭವ, ಬುದ್ಧ ಮತ್ತು ಅಮಿತೇಯಸ್ ಅವರ ಸುಮಾರು 40 ಅಡಿ ಎತ್ತರದ ಬೌದ್ಧ ಪ್ರತಿಮೆಗಳು ಆಕರ್ಷಕವಾಗಿವೆ. ದೇಗುಲದಲ್ಲಿನ ಗೋಡೆಗಳ ಮೇಲೆ ಚಿತ್ತಾಕರ್ಷಕವಾದ ವಿನ್ಯಾಸಗಳಿದ್ದು, ಟಿಬೆಟ್ ಬೌದ್ಧ ಪುರಾಣಗಳಲ್ಲಿ ಇರುವಂತೆ ದೇವತೆಗಳು, ರಾಕ್ಷಸರ ಚಿತ್ರಗಳನ್ನು ಬಿಡಿಸಲಾಗಿದೆ.

ಬಂಗಾರದ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿರುವ ಪೀಠಗಳನ್ನು ಅಲಂಕರಿಸಲಾಗಿದೆ. ಸುತ್ತಲೂ ಉದ್ಯಾನವಿದ್ದು, ಹಸಿರಿನ ನೋಟ ಮನಸಿಗೆ ಮುದ ನೀಡುತ್ತದೆ. ಬೌದ್ಧ ಭಿಕ್ಷುಗಳು ಶಿಕ್ಷಣ ಪಡೆಯುವ ಕಲಿಕಾ ಕೇಂದ್ರ ಇಲ್ಲಿದೆ. ಸುತ್ತಲಿನ ಅಂಗಡಿಗಳಲ್ಲಿ ಟಿಬೆಟ್ ಆಭರಣ, ಕರಕುಶಲ ವಸ್ತುಗಳು ಸ್ಮರಣಿಕೆಗಳು ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಬಹುದಾಗಿದೆ.

ವಿಶೇಷ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವುದರಿಂದ ಟಿಬೆಟ್ ಬೌದ್ಧ ಸಂಸ್ಕೃತಿಯನ್ನು ತಿಳಿದುಕೊಳ್ಳಬಹುದಾಗಿದೆ. ಬೆಂಗಳೂರಿನಿಂದ ಸುಮಾರು 250, ಮೈಸೂರಿನಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿ ಬೈಲಕುಪ್ಪೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...