alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪಿತಪ್ಪಿಯೂ ಈ ಜಾಗಕ್ಕೆ ಸಹೋದರ-ಸಹೋದರಿ ಜೊತೆ ಹೋಗಬೇಡಿ

ಭಾರತದಲ್ಲಿ ರಹಸ್ಯ ಪ್ರದೇಶಗಳು ಸಾಕಷ್ಟಿವೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಸಂಪ್ರದಾಯ, ನಂಬಿಕೆಯಿದೆ. ಉತ್ತರ ಪ್ರದೇಶದ ಮಿನಾರ್ ನಲ್ಲಿ ವಿಭಿನ್ನ ಪದ್ಧತಿ ರೂಢಿಯಲ್ಲಿದೆ. ಲಂಕಾ ಮಿನಾರ್ ಎಂದು ಕರೆಯಲ್ಪಡುವ ಈ ಮಿನಾರ್ ಗೆ ಸಹೋದರ-ಸಹೋದರಿಯರು ಪ್ರವೇಶ ಮಾಡುವಂತಿಲ್ಲ.

ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯಲ್ಲಿರುವ ಈ ಮಿನಾರ್ ಎತ್ತರ ಸುಮಾರು 210 ಮೀಟರ್. ಇದನ್ನು ತಯಾರಿಸಲು ಸಿಮೆಂಟ್, ಕಲ್ಲನ್ನು ಬಳಸಿಲ್ಲ. ಉದ್ದಿನ ಬೇಳೆ, ಶಂಖ, ಕಪ್ಪೆ ಚಿಪ್ಪನ್ನು ಬಳಸಲಾಗಿದೆ. ದೇಶದ ಅತ್ಯಂತ ಎತ್ತರದ ಮಿನಾರ್ ಎಂಬ ಹೆಗ್ಗಳಿಕೆ ಇದಕ್ಕಿದೆ.

ಇದ್ರ ಪಕ್ಕದಲ್ಲಿಯೇ ಕುಂಭಕರ್ಣ ಹಾಗೂ ಮೇಘನಾಥನ ಮೂರ್ತಿಗಳಿವೆ. ಇದ್ರಲ್ಲಿ ಕೇವಲ ರಾವಣನೊಬ್ಬನೇ ಅಲ್ಲ ಇಡೀ ರಾವಣ ಕುಟುಂಬದ ಚಿತ್ರಗಳಿವೆ. ಇದನ್ನು ತಲುಪಲು ವಿಶೇಷವಾದ ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳ ಮೂಲಕ ಮಿನಾರ್ ತಲುಪಿದ್ರೆ ಸಪ್ತಪದಿ ತುಳಿದಂತೆ.

ಹಿಂದೂ ಧರ್ಮದಲ್ಲಿ ಹುಡುಗ-ಹುಡುಗಿ ಸಪ್ತಪದಿ ತುಳಿದ್ರೆ ಮದುವೆಯಾದಂತೆ. ಹಾಗಾಗಿ ಇಲ್ಲಿಗೆ ಸಹೋದರ-ಸಹೋದರಿ ಒಟ್ಟಿಗೆ ಹೋಗಬಾರದು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...