alex Certify
ಕನ್ನಡ ದುನಿಯಾ       Mobile App
       

Kannada Duniya

80 ವರ್ಷದ ಈ ಮಹಿಳೆ ಅಡುಗೆ ಸವಿಯಲು ಬರ್ತಾರೆ ವಿದೇಶಿಗರು

ಭಾರತ ಪ್ರವಾಸಿಗರನ್ನು ಸೆಳೆಯುತ್ತದೆ. ಭಾರತದ ಸಂಸ್ಕೃತಿ, ಆಹಾರ ಪದ್ಧತಿ ವಿದೇಶಿಗರನ್ನು ಆಕರ್ಷಿಸುತ್ತದೆ. ಪ್ರವಾಸಕ್ಕೆ ಬಂದ ವಿದೇಶಿಗರು ಹೊಟೇಲ್ ಆಹಾರ ಸವಿಯೋದು ಮಾಮೂಲಿ. ಆದ್ರೆ ರಾಜಸ್ತಾನದ ಜೈಸಲ್ಮೇರ್ ನಲ್ಲಿ ಮಾತ್ರ ಹೊಟೇಲ್ ಗೆ ಹೋಗುವ ಬದಲು 80 ವರ್ಷದ ಅಜ್ಜಿ ಮನೆಗೆ ಬರ್ತಾರೆ ವಿದೇಶಿಗರು.

80 ವರ್ಷದ ಚಂದಾ ದೇವಿ ಕೈ ರುಚಿ ಸವಿದವರು ಮತ್ತೆ ಮತ್ತೆ ಇಲ್ಲಿಗೆ ಬರ್ತಾರೆ. ವರ್ಷ 80 ಆದ್ರೂ ಚಂದಾ ದೇವಿ ಉತ್ಸಾಹ ಮಾತ್ರ ಇಳಿದಿಲ್ಲ. ಹರೆಯದವರನ್ನು ನಾಚಿಸುವಂತೆ ಕೆಲಸ ಮಾಡ್ತಾರೆ ಚಂದಾ ದೇವಿ. ಅಡುಗೆ ಮನೆಯನ್ನೇ ರೆಸ್ಟೋರೆಂಟ್ ಆಗಿ ಬದಲಾಯಿಸಿಕೊಂಡಿದ್ದಾರೆ ಚಂದಾ ದೇವಿ.

ವ್ಯಾಸ್ ಮೀಲ್ ಹೆಸರಿನ ಈ ರೆಸ್ಟೋರೆಂಟ್ ಇಂಟರ್ನ್ಯಾಷನಲ್ ಗೈಡ್ ಬುಕ್ ಲೋನ್ಲಿ ಪ್ಲಾನೆಟ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. 40 ವರ್ಷಗಳ ಹಿಂದೆ ಚಂದಾ ದೇವಿ ಈ ರೆಸ್ಟೋರೆಂಟ್ ಶುರು ಮಾಡಿದ್ದರು. ಮನೆ ಮಂದಿಗೆ ನೀಡುವ ಆಹಾರವನ್ನೇ ಗ್ರಾಹಕರಿಗೆ ನೀಡ್ತಾರೆ ಚಂದಾ ದೇವಿ. ಮಗಳ ಮದುವೆಯಿಂದ ಹಿಡಿದು ಕುಟುಂಬಸ್ಥರ ಎಲ್ಲ ಖರ್ಚನ್ನು ಚಂದಾ ದೇವಿ ಈ ರೆಸ್ಟೋರೆಂಟ್ ನಿಂದ ಬರುವ ಆದಾಯದಲ್ಲಿ ನಿಭಾಯಿಸುತ್ತಿದ್ದಾರೆ. ಜೈಸಲ್ಮೇರ್ ಗೆ ಹೋದ್ರೆ ಅವಶ್ಯವಾಗಿ ಚಂದಾ ದೇವಿ ಕೈರುಚಿ ಸವಿದು ಬನ್ನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...