alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುಂದರ ನಗರಗಳ ದೀಪಾವಳಿಯನ್ನೊಮ್ಮೆ ಕಣ್ತುಂಬಿಕೊಳ್ಳಿ

ದೀಪಾವಳಿ ಹಬ್ಬಕ್ಕೆ ಈ ಬಾರಿ ಭರ್ಜರಿ ರಜೆ ಸಿಗ್ತಿದೆ. ಸುಮಾರು ನಾಲ್ಕು ದಿನಗಳ ಕಾಲ ರಜೆ ಬಂದಿರುವುದ್ರಿಂದ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲು ಬಹುತೇಕರು ಯೋಚಿಸ್ತಿದ್ದಾರೆ. ದೀಪಾವಳಿಯಲ್ಲಿ ನೀವೂ ಹೊರಗೆ ಹೋಗುವ ಪ್ಲಾನ್ ಮಾಡಿದ್ದರೆ ಈ ಸುಂದರ ಸ್ಥಳಗಳಲ್ಲಿ ಒಂದು ಸ್ಥಳಕ್ಕೆ ಹೋಗಿ ಬನ್ನಿ.

ಜೈಪುರ : ಪಿಂಕ್ ಸಿಟಿಯ ದೀಪಾವಳಿ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ದೀಪಾವಳಿ ದಿನ ದೀಪಗಳು, ಲೈಟ್ಸ್, ಬಣ್ಣ ಬಣ್ಣದ ಬೆಳಕಿನಿಂದ ಪಿಂಕ್ ಸಿಟಿ ಸೌಂದರ್ಯ ದುಪ್ಪಟ್ಟಾಗುತ್ತದೆ. ದೀಪಾವಳಿ ಆಚರಿಸಲು ವಿದೇಶಿಗರು ಕೂಡ ಇಲ್ಲಿಗೆ ಬರ್ತಾರೆ. ಹೊಟೇಲ್ ಗಳಲ್ಲಿ ಭಾರತೀಯ ಸಂಪ್ರದಾಯದ ಉಡುಗೆ ತೊಟ್ಟು ದೀಪ ಹಚ್ಚಿ ದೀಪಾವಳಿ ಆಚರಣೆ ಮಾಡಲಾಗುತ್ತದೆ. ರಾಜಸ್ತಾನಿ ಸಂಸ್ಕೃತಿಯ ದೀಪಾವಳಿ ಮನಸ್ಸಿಗೆ ಮುದ ನೀಡುತ್ತದೆ.

ಜೋದ್ಪುರ : ನೀಲಿ ನಗರ ಐತಿಹಾಸಿಕ ನಗರದಲ್ಲಿ ದೀಪಾವಳಿ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಕೋಟೆಗಳು ಹಾಗೂ ಮನೆಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಪ್ರವಾಸಿಗರಿಗಾಗಿಯೇ ಇಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ಬನಾರಸ್ : ಶಿವನ ನಗರ ಬನಾರಸ್ ದೀಪಾವಳಿ ಕೂಡ ಪ್ರಸಿದ್ಧಿ ಪಡೆದಿದೆ. ಇಡೀ ನಗರ ವಧುವಿನಂತೆ ಸಿಂಗಾರಗೊಳ್ಳುತ್ತದೆ. ದೀಪಾವಳಿಗೂ ಮೊದಲೇ ಈ ನಗರದ ಬೀದಿಗಳು ದೀಪಗಳಿಂದ ಅಲಂಕಾರಗೊಳ್ಳುತ್ತವೆ. ಸಾಂಪ್ರದಾಯಿಕ ಉಡುಗೆಯಲ್ಲಿ ವಿದೇಶಿಗರು ಕೂಡ ಇಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸ್ತಾರೆ.

ಉಜ್ಜೈನಿ : ದೀಪಾವಳಿಯಲ್ಲೊಮ್ಮೆ ಉಜ್ಜೈನಿಗೆ ಹೋಗಿ ಬನ್ನಿ. ದೀಪಾವಳಿಯಲ್ಲಿ ಉಜ್ಜೈನಿ ಸಂಭ್ರಮವನ್ನು ಪದಗಳಿಂದ ಹೇಳಲು ಸಾಧ್ಯವಿಲ್ಲ. ದೀಪದ ಅಲಂಕಾರ, ದೇವಸ್ಥಾನದಲ್ಲಿ ನಡೆಯುವ ಪೂಜೆ ಜೊತೆ ಸಂಗೀತ ಕಾರ್ಯಕ್ರಮಗಳು ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...