alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ ಸೆಟ್ ನೋಡಲು ನೀಡಬೇಕು ಇಷ್ಟೊಂದು ಹಣ..!

ನೀವೂ ಕೂಡ ಬಾಹುಬಲಿ ಅಭಿಮಾನಿಯಾಗಿದ್ದು, ಬಾಹುಬಲಿ ಸಾಮ್ರಾಜ್ಯವನ್ನು ವಾಸ್ತವದಲ್ಲಿ ನೋಡಲು ಬಯಸಿದ್ದರೆ ನಿಮಗೊಂದು ಖುಷಿ ಸುದ್ದಿ. ಇನ್ಮುಂದೆ ನೀವು ಬಾಹುಬಲಿ ವಿಶಾಲ ಸಾಮ್ರಾಜ್ಯವನ್ನು ನೋಡಬಹುದಾಗಿದೆ. ಬಾಹುಬಲಿ ಸೆಟ್ ಪ್ರವಾಸಿಗರಿಗಾಗಿ ತೆರೆಯಲ್ಪಟ್ಟಿದೆ.

ಹೈದ್ರಾಬಾದ್ ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಬಾಹುಬಲಿ ಸೆಟ್ ನಿರ್ಮಾಣವಾಗಿತ್ತು. ಈಗ ಈ ಸೆಟ್ ಪ್ರವಾಸಿಗರಿಗೆ ತೆರೆದಿದೆ. ಆದ್ರೆ ಈ ಸೆಟ್ ನೋಡ ಬಯಸುವ ಪ್ರವಾಸಿಗರ ಜೇಬಿಗೆ ಕತ್ತರಿ ಬೀಳಲಿದೆ. ಯಾಕೆಂದ್ರೆ ಸಾಮಾನ್ಯ ಟಿಕೆಟ್ ಬೆಲೆಯೇ 1250 ರೂಪಾಯಿ. ಪ್ರೀಮಿಯರ್ ಟಿಕೆಟ್ ಗಾಗಿ 2349 ರೂಪಾಯಿ ನೀಡಬೇಕು.

ವಿದ್ಯಾರ್ಥಿಗಳು ಹಾಗೂ ಕಾರ್ಪೋರೇಟ್ ಗಳು ತಮಗಾಗಿ ಟಿಕೆಟ್ ಬುಕ್ಕಿಂಗ್ ಶುರುಮಾಡಿದ್ದಾರೆ. ರಾಮೋಜಿ ರಾವ್ ಫಿಲ್ಮ್ ಸಿಟಿ ವೆಬ್ ಸೈಟ್ ಗೆ ಹೋಗಿ ನೀವೂ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. 100 ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ಈ ಬಾಹುಬಲಿ ಸೆಟ್ ಗಾಗಿ 60 ಕೋಟಿ ಖರ್ಚು ಮಾಡಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...