alex Certify
ಕನ್ನಡ ದುನಿಯಾ       Mobile App
       

Kannada Duniya

ಮಳೆಗಾಲದಲ್ಲಿ ಕಣ್ಮನ ಸೆಳೆಯುತ್ತೆ ಅಂಬೋಲಿ ಸೌಂದರ್ಯ

image005-760778

ಮಳೆಗಾಲ ಶುರುವಾಗಿದೆ. ಚುಮು ಚುಮು ಚಳಿಯ ನಡುವೆ ಹನಿ ಮಳೆಯ ಜೊತೆಯಲ್ಲಿ ಹಸಿರು ಬೆಟ್ಟಗಳನ್ನು ನೋಡಲು ಅನೇಕರು ಹಾತೊರೆಯುತ್ತಿರುತ್ತಾರೆ. ವೀಕೆಂಡ್ ನಲ್ಲಿ ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋಗಲು ಯಾವ ಸ್ಥಳ ಬೆಸ್ಟ್ ಎಂಬ ಗೊಂದಲ ಅನೇಕರನ್ನು ಕಾಡುತ್ತಿರುತ್ತದೆ.

ಮಳೆಗಾಲದಲ್ಲಿ ಗಿರಿಧಾಮದ ಮಜಾ ಸವಿಯಲು ಬಯಸುವವರಿಗೆ ಅಂಬೋಲಿ ಹೇಳಿ ಮಾಡಿಸಿದ ಸ್ಥಳ. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಸುಂದರ ಸ್ಥಳ ಅಂಬೋಲಿ. ಹಸಿರು ಪರ್ವತ, ಫಲವತ್ತಾದ ಪ್ರದೇಶ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವುದರಲ್ಲಿ ಎರಡು ಮಾತಿಲ್ಲ.

ವೀಕೆಂಡ್ ಫ್ಯಾಮಿಲಿ ಟ್ರಿಪ್ ಗೆ ಅಂಬೋಲಿ ಫರ್ಪೆಕ್ಟ್ ಜಾಗ. ಈ ಗಿರಿಧಾಮದಿಂದ 28 ಕಿಲೋಮೀಟರ್ ದೂರದಲ್ಲಿ ಸಾವಂತವಾಡಿ ರೈಲ್ವೆ ನಿಲ್ದಾಣವಿದೆ. ಬೆಳಗಾವಿ ವಿಮಾನ ನಿಲ್ದಾಣ 64 ಕಿಲೋಮೀಟರ್ ದೂರದಲ್ಲಿದೆ. ಮುಂದಿನ ಪ್ರಯಾಣಕ್ಕೆ ನೀವು ರಿಕ್ಷಾ ಅಥವಾ ಟ್ಯಾಕ್ಸಿ ಬಳಸಬಹುದಾಗಿದೆ.

ಬೆಂಗಳೂರು, ಸಾವಂತವಾಡಿ, ರತ್ನಗಿರಿ ಹಾಗೂ ಬೆಳಗಾವಿಯಿಂದ ಅಂಬೋಲಿಗೆ ರಾಜ್ಯ ಸಾರಿಗೆ ಬಸ್ ಪ್ರತಿದಿನ ಸಂಚರಿಸುತ್ತದೆ. ಅಂಬೋಲಿಯಲ್ಲಿ ಉತ್ತಮವಾದ ಹಾಗೂ ಅಗ್ಗದ ಹೊಟೇಲ್ ಕೂಡ ಬೇಕಾದಷ್ಟಿದೆ. ಅಂಬೋಲಿ ಗ್ರಾಮದ ಸುತ್ತಮುತ್ತ ಅನೇಕ ಪ್ರವಾಸಿ ಸ್ಥಳಗಳಿವೆ. ಗ್ರಾಮದ ಬಳಿ ಪ್ರಾಚೀನ ಶಿವ ದೇವಾಲಯವಿದೆ. ಗುಹೆಯೊಳಗೆ 108 ಶಿವನ ದೇವಾಲಯವಿದ್ದು, ಅದ್ರಲ್ಲಿ ಕೆಲ ದೇವಾಲಯಗಳು ಮಾತ್ರ ಕಣ್ಣಿಗೆ ಕಾಣುತ್ತವೆಯಂತೆ.

ಮೀನು ಹಿಡಿಯುವ ಆಸೆ ಇರುವವರು ಹಿರಣ್ಯಕೋಶಿಯಲ್ಲಿ ಗಂಟೆಗಟ್ಟಲೆ ಕಾಲ ಕಳೆಯಬಹುದಾಗಿದೆ. ಸನ್ ಸೆಟ್ ಪಾಯಿಂಟ್ ಇಲ್ಲಿದೆ. ಮಳೆಗಾಲದಲ್ಲಿ ಅತಿಯಾದ ಮಳೆಯಿಂದಾಗಿ ಕೃತಕವಾಗಿ ಸೃಷ್ಟಿಯಾಗುವ ಜಲಪಾತಗಳು ಪ್ರವಾಸಿಗರ ಮನಸ್ಸಿಗೆ ಹಿತ ನೀಡುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...