alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಕೃತಿ ಪ್ರಿಯರನ್ನು ಸೆಳೆಯುತ್ತೆ ಅಲೆಪ್ಪಿ ಕಡಲ ತೀರ

ಕೆಲಸದ ಒತ್ತಡದಿಂದ ಒಂದು ಬ್ರೇಕ್ ತಗೊಂಡು ಆರಾಮವಾಗಿ ಕಾಲಕಳೆಯಲು ಯೋಚ್ನೇ ಮಾಡ್ತಾ ಇದ್ದೀರಾ? ಹಾಗಿದ್ರೆ ಕೇರಳದಲ್ಲಿರುವ ಅಲೆಪ್ಪಿ ಬೀಚ್ ಗೆ ಹೋಗಿಬನ್ನಿ. ವಿಶಾಲವಾದ ಕಡಲ ತೀರ, ಕಡಲಿನಾಳದಿಂದ ಅಲೆಗಳ ರಭಸಕ್ಕೆ ತೇಲಿಬಂದು ಸೃಷ್ಟಿಯಾದ ಹವಳದ ದಂಡೆಗಳು. ನಿಮ್ಮ ಕಲ್ಪನೆಗೆ ನಿಲುಕದಷ್ಟು ದಿಗ್ಭ್ರಮೆಗೆ ಒಳಗಾಗಿಸುವಷ್ಟು ಶಕ್ತಿ ಈ ಅಲೆಪ್ಪಿಯಲ್ಲಿದೆ.

ಇಲ್ಲಿನ ಕಡಲ ತೀರ, ಸರೋವರಗಳು, ಬೋಟ್ ಹೌಸ್ ಗಳು ಮತ್ತು ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಜಗತ್ತನ್ನೇ ಮರೆಯಬಹುದಾದಷ್ಟು ಅದ್ಭುತ ಅನುಭವವನ್ನು ನೀಡುತ್ತವೆ.ವಿಶ್ವದ ವಿವಿಧ ಭಾಗಗಳಿಂದ ದೋಣಿ ವಿಹಾರಕ್ಕೆಂದೇ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಪ್ರತಿ ವರ್ಷ ನೆಹರೂ ಟ್ರೋಫಿ ಹೆಸರಿನಲ್ಲಿ ದೋಣಿವಿಹಾರ ಸ್ಪರ್ಧೆ ಕೂಡ ನಡೆಸಲಾಗುತ್ತದೆ.

ಕೇವಲ ದೋಣಿ ವಿಹಾರ ಮಾತ್ರವಲ್ಲದೇ ಅಲೆಪ್ಪಿ, ಆಧ್ಯಾತ್ಮಿಕ ಕಾರಣದಿಂದಲೂ ಕೂಡ ಹೆಸರುವಾಸಿಯಾಗಿದೆ. ಇಲ್ಲಿ ಅಂಬಾಲಪುಳದ ಶ್ರೀಕೃಷ್ಣ ದೇವಸ್ಥಾನ, ಮುಲ್ಲಕ್ಕಲ್ಲಿನ ರಾಜೇಶ್ವರೀ ದೇವಸ್ಥಾನ, ಚೆಟ್ಟಿಕುಲಂಗರ ಭಗವತಿ ದೇವಾಲಯ, ಮನ್ನಾರಸಾಲದ ಶ್ರೀ ನಾಗರಾಜ ದೇವಾಲಯ, ಎಡತುವಾ ಚರ್ಚ್, ಸೇಂಟ್ ಸೆಬಾಸ್ಟಿಯನ್ ಚರ್ಚ್ ಮತ್ತು ಚಂಪಾಕುಲಮ್ ಚರ್ಚ್ ಮುಂತಾದವು ಇಲ್ಲಿನ ಪ್ರಸಿದ್ದ ಕ್ಷೇತ್ರಗಳಾಗಿದೆ.

ಅಲೆಪ್ಪಿಗೆ ನವೆಂಬರ್ ನಿಂದ ಫೆಬ್ರವರಿವರೆಗೂ ಭೇಟಿ ನೀಡಲು ಸಕಾಲವಾಗಿದೆ. ಇಲ್ಲಿಗೆ ಬರುವುದಕ್ಕೆ ರೈಲು, ವಿಮಾನ ಮತ್ತು ಸಾರಿಗೆ ವ್ಯವಸ್ಥೆಯಿದೆ. ವಿಮಾನದಿಂದ ಬರುವವರು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಬಸ್ ವ್ಯವಸ್ಥೆಯನ್ನು ಅವಲಂಬಿಸಬಹುದು. ರಾಷ್ಟ್ರೀಯ ಹೆದ್ದಾರಿ 47 ಈ ಪಟ್ಟಣದ ಮೂಲಕವೇ ಹಾದು ಹೋಗುವುದರಿಂದ  ದೇಶದ ಎಲ್ಲಾ ಮಹಾನಗರಗಳಿಂದಲೂ ಇಲ್ಲಿಗೆ ಸಾರಿಗೆ ಮತ್ತು ರೈಲು ವ್ಯವಸ್ಥೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...