alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರನ್ನು ಸೆಳೆಯುವ ಅಜಂತಾ ಗುಹೆಗಳು

ಔರಂಗಬಾದ್ ನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿರುವ ಅಜಂತಾ ಗುಹೆಗಳಿಂದಾಗಿ ವಿಶ್ವ ಪ್ರಸಿದ್ಧಿಯಾಗಿದೆ. ಬೆಟ್ಟವನ್ನು ಕೊರೆದು ರಚಿಸಲಾದ 30 ಗುಹೆಗಳು ಬೌದ್ಧ ಧರ್ಮ ಪರಂಪರೆಗೆ ಸಂಬಂಧಿಸಿವೆ.

ಗುಹೆಗಳ ಗೋಡೆಗಳ ಮೇಲೆ ರಚಿಸಲಾದ ಭಿತ್ತಿ ಚಿತ್ರಗಳು ಮತ್ತು ಗುಹೆಯ ಒಳಗೆ ಕೆತ್ತಲಾದ ಮೂರ್ತಿಗಳು ಅನುಪಮ ಸೌಂದರ್ಯದಿಂದಾಗಿ ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತವೆ.

ಇಲ್ಲಿನ ಅಮೂಲ್ಯವಾದ ಶಿಲ್ಪಕಲೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಪ್ರವಾಸಿಗರ ಮಹಾಪೂರವೇ ಹರಿದು ಬರುತ್ತದೆ. ನೋಡಲು ಅದ್ಭುತವೆನಿಸುವ ಗುಹೆಗಳನ್ನು 2 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ.

ಬೌದ್ಧ ಧರ್ಮದ ಪಂಥಗಳಾದ ಹಿನಯಾನ ಮತ್ತು ಮಹಾಯಾನಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಕಾಣಬಹುದಾಗಿದೆ. ಪುರಾತತ್ವ ಇಲಾಖೆಯ ಪ್ರಕಾರ, 1819 ರಲ್ಲಿ ಬ್ರಿಟಿಷ್ ಸೇನೆಯ ಅಧಿಕಾರಿಯೊಬ್ಬ ಬೇಟೆಗಾಗಿ ಬಂದಿದ್ದ ಸಂದರ್ಭದಲ್ಲಿ ಗುಹೆಗಳಿರುವುದು ಬೆಳಕಿಗೆ ಬಂದಿತ್ತು. 1920 ರಿಂದ ಇವುಗಳ ರಕ್ಷಣೆಗೆ ಗಮನ ನೀಡಲಾಯಿತು.

1 ನೇ ಗುಹೆಯಲ್ಲಿರುವ ಚಿತ್ರಕಲೆ, ಶಿಲ್ಪಕಲೆ ಸೊಗಸಾಗಿದೆ. 1 ತಲೆ 4 ದೇಹಗಳನ್ನು ಹೊಂದಿರುವ ಜಿಂಕೆಯ ಶಿಲ್ಪ ಗಮನ ಸೆಳೆಯುತ್ತದೆ. 2 ನೇ ಗುಹೆಯಲ್ಲಿ ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನಾವಳಿಗಳನ್ನು ಚಿತ್ರಿಸಲಾಗಿದೆ. ಛಾವಣಿಯ ಚಿತ್ರಗಳು ನೋಡುಗರನ್ನು ಸೆಳೆಯುತ್ತವೆ.

ಇಲ್ಲಿರುವ ಗುಹೆಗಳಲ್ಲಿ 4 ನೇ ಗುಹೆ ದೊಡ್ಡ ಬೌದ್ಧ ವಿಹಾರವಾಗಿದೆ. 28 ಕಂಬಗಳಿದ್ದು, ಭಿತ್ತಿ ಚಿತ್ರಗಳು ಆಕರ್ಷಕವಾಗಿವೆ. 6 ನೇ ಗುಹೆ ಅಂತಸ್ತುಗಳನ್ನು ಒಳಗೊಂಡಿದೆ. ಇದರಲ್ಲಿನ ಶಿಲ್ಪಕಲೆಯ ಸೊಬಗು ಅದ್ಭುತವಾಗಿದೆ.

ಎದುರಿನ ಬೆಟ್ಟದಿಂದ ಗುಹೆಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಔರಂಗಬಾದ್ ಗೆ ದೇಶದ ಪ್ರಮುಖ ನಗರಗಳಿಂದ ಸಂಪರ್ಕವಿದೆ. ನೀವೂ ಒಮ್ಮೆ ಅಜಂತಾ ಗುಹೆಗಳನ್ನು ಕಣ್ತುಂಬಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...