alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಸೆಳೆಯುತ್ತಿದೆ ಮುಂಬೈನ ಸೆಲ್ಫಿ ಪಾಯಿಂಟ್

mumbai-selfie-point_650x400_71492154253

ಏಪ್ರಿಲ್-ಮೇ ಬಂತು ಅಂದ್ರೆ ಮಕ್ಕಳಿಗೆಲ್ಲ ಹಾಲಿಡೇ. ಎಲ್ರೂ ಸಾಮಾನ್ಯವಾಗಿ  ಫ್ಯಾಮಿಲಿ ಜೊತೆಗೆ ಪ್ರವಾಸ ಹೋಗ್ತಾರೆ. ನೀವೇನಾದ್ರೂ ಈ ಬಾರಿ ರಜೆಯಲ್ಲಿ ವಾಣಿಜ್ಯ ನಗರಿ ಮುಂಬೈಗೆ ಬಂದ್ರೆ ನಿಮಗೆ ಅಲ್ಲೊಂದು ಹೊಸ ಆಕರ್ಷಣೆಯಿದೆ. ಈ ವಿಶೇಷ ಸ್ಥಳ ಯಾವುದು ಗೊತ್ತಾ? ಸೆಲ್ಫಿ ಪಾಯಿಂಟ್.

ಮುಂಬೈನ ಸೆಲ್ಫಿ ಪಾಯಿಂಟ್ ಅನ್ನು ಶಿವಸೇನೆಯ ಯುವ ನಾಯಕ ಆದಿತ್ಯ ಠಾಕ್ರೆ ಉದ್ಘಾಟಿಸಿದ್ದಾರೆ. ಈ ಸ್ಥಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರೋ ಆದಿತ್ಯ ಠಾಕ್ರೆ ಅದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 128 ವರ್ಷ ಹಳೆಯ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಮುಂಬೈನಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಸ್ಥಳಗಳಲ್ಲೊಂದು.

aditya-thackeray-selfie-pti_650x400_61492153582

ಫೋಟೋಗ್ರಫಿಗೂ ಕೂಡ ಇದು ಹೇಳಿ ಮಾಡಿಸಿದಂತಹ ಜಾಗ. ಹಾಗಾಗಿ ಶಿವಾಜಿ ಟರ್ಮಿನಸ್ ಹಿನ್ನೆಲೆಯಲ್ಲಿ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳಲು ಅನುಕೂಲವಾಗುವಂತೆ ಸೆಲ್ಫಿ ಪಾಯಿಂಟ್ ಮಾಡಲಾಗಿದೆ. ಈ ಸೆಲ್ಫಿ ಪಾಯಿಂಟ್ ಮಾಡಲು 80 ಲಕ್ಷ ರೂಪಾಯಿ ಖರ್ಚಾಗಿದೆ.

ಕೆಲವರು ಸೆಲ್ಫಿ ಕ್ರೇಜ್ ಗೆ ಪ್ರಾಣವನ್ನೇ ಕಳೆದುಕೊಳ್ತಾರೆ. ಮುಂಬೈನಲ್ಲಿ ಕೂಡ ಅಂತಹ 16 ಅಪಾಯಕಾರಿ ಸೆಲ್ಫಿ ಪಾಯಿಂಟ್ ಗಳನ್ನು ಪೊಲೀಸರು ಗುರುತಿಸಿದ್ದಾರೆ, ಪ್ರವಾಸಿಗರ ಅನುಕೂಲಕ್ಕಾಗಿಯೇ ಈಗ ಪ್ರತ್ಯೇಕ ಸೆಲ್ಫಿ ಪಾಯಿಂಟ್ ಅನ್ನು ನಿರ್ಮಾಣ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...