alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ ಮೂಡಿಸುವ ಎಲ್ಲೋರ ಗುಹೆಗಳು

ಔರಂಗಬಾದ್ ನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಎಲ್ಲೋರ ಗುಹೆಗಳು ನೋಡುಗರಲ್ಲಿ ಅಚ್ಚರಿ ಮೂಡಿಸುತ್ತವೆ. ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾಗಿದ್ದು, ಕಲ್ಲಿನ ಬಂಡೆಯನ್ನು ಕೊರೆದು ನಿರ್ಮಿಸಿರುವ ಗುಹೆಗಳಲ್ಲಿ ಭಾರತದ ಕೆತ್ತನೆಯ ವಾಸ್ತುಶಿಲ್ಪ ಹೇಗಿದೆ ಎಂಬುದನ್ನು ಸಾರಿ ಹೇಳುತ್ತದೆ.

ಎಲ್ಲೋರ ಗುಹೆಯಲ್ಲಿನ ಶಿಲ್ಪಗಳು ಹಿಂದೂ, ಬೌದ್ಧ ಹಾಗೂ ಜೈನ ಧರ್ಮದ ಸಂಸ್ಕೃತಿಯನ್ನು ಬಿಂಬಿಸಲಿದ್ದು, ಮೂರು ಧರ್ಮಗಳ ಸಮನ್ವಯವನ್ನು ಕಾಣಬಹುದಾಗಿದೆ. ಬೆಟ್ಟದ ಪದರಗಳಲ್ಲಿ ಬಂಡೆಗಲ್ಲಿನಲ್ಲಿ ನಿರ್ಮಾಣವಾದ ಗುಹೆಗಳಲ್ಲಿ 16 ಹಿಂದೂ ಧರ್ಮದವು, 13 ಬೌದ್ಧ ಹಾಗೂ 5 ಜೈನ ಧರ್ಮಕ್ಕೆ ಸಂಬಂಧಿಸಿವೆ. ಅಜಂತಾದ ಗುಹಾಂತರ ದೇವಾಲಯಗಳಲ್ಲಿ ಭಿತ್ತಿಚಿತ್ರಕಲೆಯನ್ನು ಕಂಡರೆ ಎಲ್ಲೋರಾದಲ್ಲಿ ಅಪರೂಪದ ಶಿಲ್ಪ ಕಲೆಯ ಸೊಬಗನ್ನು ಸವಿಯಬಹುದಾಗಿದೆ.

ವಿವಿಧ ವಿನ್ಯಾಸಗಳಲ್ಲಿ ಗುಹೆಗಳು ಇದ್ದು, 5 ನೇಯ ಗುಹೆಯಂತೂ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಅತಿ ದೊಡ್ಡ ಗುಹೆಯಾಗಿದೆ. ಇದರಲ್ಲಿ 24 ಸ್ತಂಭಗಳಿವೆ. ಆರನೇ ಗುಹೆಯಲ್ಲಿ ಸರಸ್ವತಿ ಪ್ರತಿಮೆ, ಬೌದ್ಧ ಧರ್ಮದ ವಿಗ್ರಹಗಳು ಇವೆ. 10 ನೇ ಗುಹೆಯಲ್ಲಿ ಬುದ್ಧನ ಬೃಹತ್ ವಿಗ್ರಹವನ್ನು ಕಾಣಬಹುದು. 14ನೇ ಗುಹೆಯಲ್ಲಿ ಹಿಂದೂಧರ್ಮದ ಶಿಲ್ಪಗಳು, 15ನೇ ಗುಹೆಯಲ್ಲಿ ಶಿವನ ದೇವಾಲಯವಿದ್ದು ಭಕ್ತಿಯ ತಾಣವಾಗಿದೆ.

ಇಡೀ ಎಲ್ಲೋರಾ ಗುಹೆಗಳು ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ. ಔರಂಗಬಾದ್ ನಿಂದ ವಾಹನ ಸೌಲಭ್ಯಗಳಿವೆ. ವಸತಿಗೃಹಗಳು ಹೋಟೆಲ್ ಗಳಿದ್ದು, ಮೊದಲೇ ನಿಗದಿ ಮಾಡಿಕೊಳ್ಳುವುದು ಒಳಿತು. ಪ್ರವಾಸಿಗರು ವರ್ಷವಿಡಿ ಇಲ್ಲಿಗೆ ಭೇಟಿ ನೀಡುತ್ತಾರೆ.

Leave a Reply

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...