alex Certify
ಕನ್ನಡ ದುನಿಯಾ       Mobile App
       

Kannada Duniya

ಫುಟ್ಬಾಲ್ ಆಡಿ ಸುಸ್ತಾಗಿದ್ದ ತಂದೆಗೆ ನೀರು ಕುಡಿಸಿದ್ಲು ಜೀವಾ

ಬಾಲಿವುಡ್ ಸ್ಟಾರ್ಸ್ ಮತ್ತು ಕ್ರಿಕೆಟ್ ಆಟಗಾರರ ಮಧ್ಯೆ ಫುಟ್ಬಾಲ್ ಪಂದ್ಯ ನಡೆದಿದೆ. ಭಾನುವಾರ ರಾತ್ರಿ ಮುಂಬೈನ ಅಂಧೇರಿ ಸ್ಪೋರ್ಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಚಾರಿಟಿ ಮ್ಯಾಚ್ ನಲ್ಲಿ ಕೊಹ್ಲಿ ಪಡೆ ಕಮಾಲ್ ಮಾಡಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆಲ್ ಹಾರ್ಟ್ ಎಸ್ಫಿ ತಂಡ ರಣಬೀರ್ ಕಪೂರ್ ನೇತೃತ್ವದ ಆಲ್ ಸ್ಟಾರ್ಸ್ ಎಸ್ಫಿ ತಂಡವನ್ನು ಸೋಲಿಸಿದೆ.

ಕೊಹ್ಲಿ ಟೀಂ 7-3 ಅಂಕಗಳಿಂದ ರಣಬೀರ್ ಪಡೆಯನ್ನು ಬಗ್ಗುಬಡಿದಿದೆ. ಹಿಂದಿನ ವರ್ಷ ಕೂಡ ಎರಡೂ ತಂಡಗಳ ಮಧ್ಯೆ ಪಂದ್ಯ ನಡೆದಿತ್ತು. ಆ ವೇಳೆ 2-2 ಅಂಕಗಳಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಈ ಬಾರಿ ಕೊಹ್ಲಿ ಟೀಂನಲ್ಲಿ ಮಾಜಿ ನಾಯಕ ಧೋನಿ ಕೂಡ ಕಾಣಿಸಿಕೊಂಡಿದ್ದರು.

ತಮ್ಮ ಫುಟ್ಬಾಲ್ ಸ್ಕಿಲ್ ತೋರಿಸಿದ ಧೋನಿ ಎರಡು ಗೋಲ್ ಬಾರಿಸಿದ್ರು. ಆದ್ರೆ ಇಲ್ಲಿ ಗಮನ ಸೆಳೆದಿದ್ದು ಕೊಹ್ಲಿಯಾಗ್ಲಿ, ಧೋನಿಯಾಗ್ಲಿ ಅಲ್ಲ. ಕೊಹ್ಲಿ ತಂಡಕ್ಕೆ ಬೆಂಬಲ ನೀಡಿದ ಪುಟ್ಟ ಬಾಲಕಿ ಧೋನಿ ಮಗಳು ಜೀವಾ. ಪಂದ್ಯ ಮುಗಿಯುತ್ತಿದ್ದಂತೆ ಮೈದಾನಕ್ಕೆ ಬಂದಿದ್ದಾಳೆ ಜೀವಾ. ಆಕೆ ಕೈನಲ್ಲಿ ನೀರಿನ ಬಾಟಲ್ ಇತ್ತು. ಸುಸ್ತಾಗಿದ್ದ ಧೋನಿ ಮಗಳ ಕೈನಿಂದ ನೀರು ಕುಡಿಯಲು ಬಯಸಿದ್ರು. ಇದನ್ನು ಅರಿತ ಜೀವಾ ತಂದೆಗೆ ನೀರು ಕುಡಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...