alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ-ಕೊಹ್ಲಿ ಪ್ರೀತಿಗೆ ನೆರವಾಗಿದ್ಯಾರು ಗೊತ್ತಾ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೀತಿ ವಿಚಾರ ಆಗಾಗ ಸುದ್ದಿಯಾಗ್ತಿರುತ್ತೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅನೇಕ ವರ್ಷಗಳಿಂದ ಒಟ್ಟಿಗೆ ಅಲ್ಲಲ್ಲಿ ಕಾಣಿಸಿಕೊಂಡಿದ್ದಾರೆ. ಶೀಘ್ರವೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ಇವ್ರಿಬ್ಬರ ಬಗ್ಗೆ ಅಭಿಮಾನಿಗಳು ಅನೇಕ ವಿಷ್ಯಗಳನ್ನು ತಿಳಿದುಕೊಂಡಿದ್ದಾರೆ. ಆದ್ರೆ ಇವರ ಪ್ರೀತಿಗೆ ಸೇತುವೆಯಾದವರು ಯಾರು ಎಂಬ ಬಗ್ಗೆ ಅನೇಕರಿಗೆ ಉತ್ತರ ಗೊತ್ತಿಲ್ಲ.

ಕೊಹ್ಲಿ ಇಂದು 29ನೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 20-20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಕೊಹ್ಲಿ ಹುಟ್ಟುಹಬ್ಬದ ಮೂಲಕ ಮರೆಯುತ್ತಿದ್ದಾರೆ ಅಭಿಮಾನಿಗಳು. ಕೊಹ್ಲಿ ಹುಟ್ಟುಹಬ್ಬದಂದು ಅವ್ರ ಪ್ರೀತಿಗೆ ಸೇತುವೆಯಾದವರು ಯಾರು ಎಂಬ ವಿಷ್ಯವನ್ನು ನಾವು ಹೇಳ್ತೇವೆ ಕೇಳಿ. ಕೊಹ್ಲಿ-ಅನುಷ್ಕಾ ಪ್ರೀತಿಗೆ ನೆರವಾದವರು ಜಹೀರ್ ಖಾನ್. ಯಸ್, ಆಶ್ಚರ್ಯವಾದ್ರೂ ಇದು ಸತ್ಯ.

ಸಂದರ್ಶನವೊಂದರಲ್ಲಿ ಮಾತನಾಡಿದ ಕೊಹ್ಲಿ, ಕ್ರಿಕೆಟರ್ ಒಬ್ಬರು ರಿಲೆಶನ್ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಸಲಹೆ ನೀಡಿದ್ದಾರೆ. ನನ್ನ ಸಂಬಂಧವನ್ನು ಅಡಗಿಸದೆ ಇರಲು ದೊಡ್ಡ ಕಾರಣ ಜಹೀರ್ ಖಾನ್ ಎಂದು ಹೇಳಿದ್ದಾರೆ. ನಾನು ನನ್ನ ಸಂಬಂಧದ ಬಗ್ಗೆ ಜಹೀರ್ ಖಾನ್ ಗೆ ಹೇಳಿದ್ದೆ. ಅವರು ನನಗೆ ಸೂಕ್ತ ಸಲಹೆ ನೀಡಿದ್ದರು. ಏನು ಬೇಕಾದ್ರೂ ಮಾಡು ಆದ್ರೆ ಎಂದೂ ಮುಚ್ಚಿಡಬೇಡ ಎಂದಿದ್ದರು.

ನಾನೊಬ್ಬ ಭಾಗ್ಯಶಾಲಿ. ನನ್ನ ಸಂಬಂಧದ ಬಗ್ಗೆ ಮೊದಲು ಜಹೀರ್ ಖಾನ್ ರಿಗೆ ಹೇಳಿದ್ದೆ. ಅವರು ನನಗೆ ಸರಿಯಾದ ಸಲಹೆ ನೀಡಿದ್ರು. ಅದನ್ನೇ ನಾನು ಈಗ್ಲೂ ಅನುಸರಿಸಿಕೊಂಡು ಬರುತ್ತಿದ್ದೇನೆ ಎಂದಿದ್ದಾರೆ ಕೊಹ್ಲಿ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...