alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯನ್ನು ರಾವಣನಿಗೆ ಹೋಲಿಸಿದ ಯುವಿ ತಂದೆ

dhoni

ಮೂರು ವರ್ಷಗಳ ನಂತರ ಯುವರಾಜ್ ಸಿಂಗ್ ಭಾರತ ಏಕದಿನ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಜನವರಿ 15ರಂದು ಪುಣೆಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ. ಆದ್ರೂ ಅವರ ತಂದೆ ಯೋಗರಾಜ್ ಸಿಂಗ್ ಗೆ ಸಮಾಧಾನವಿಲ್ಲ, ಪದೇ ಪದೇ ಮಹೇಂದ್ರ ಸಿಂಗ್ ಧೋನಿಯನ್ನು ಅವರು ಟಾರ್ಗೆಟ್ ಮಾಡ್ತಿದ್ದಾರೆ.

ತಮ್ಮ ಮಗ ಅವಕಾಶ ವಂಚಿತನಾಗಲು ಕಾರಣ ಧೋನಿ ಅನ್ನೋದು ಅವರ ಆರೋಪ. ಧೋನಿ ಆಟಗಾರರ ಆಯ್ಕೆಯಲ್ಲೂ ರಾಜಕೀಯ ಮಾಡ್ತಾ ಇದ್ರು ಅಂತಾ ಕಿಡಿ ಕಾರಿದ್ದಾರೆ. ಧೋನಿ ಕ್ಯಾಪ್ಟನ್ಸಿ ಬಿಟ್ಟ ಮೇಲೆ ಕೊಹ್ಲಿ ನಿನ್ನ ಪ್ರತಿಭೆ ಗುರುತಿಸ್ತಾರೆ, ತಂಡದಲ್ಲಿ ಅವಕಾಶ ಸಿಕ್ಕೇ ಸಿಗುತ್ತೆ ಹಾಗಾಗಿ ಅಭ್ಯಾಸದ ಮೇಲೆ ಗಮನ ಕೊಡು ಅಂತಾ ಯೋಗರಾಜ್ ಮಗನಿಗೆ ಹೇಳಿದ್ರಂತೆ.

ಆ ಮಾತು ಈಗ ಸತ್ಯವಾಗಿದೆ ಎನ್ನುತ್ತಿದ್ದಾರೆ. ಧೋನಿಯನ್ನು ಯೋಗರಾಜ್ ಸಿಂಗ್, ರಾವಣನಿಗೆ ಹೋಲಿಸಿದ್ದಾರೆ, ರಾಮಾಯಣದಲ್ಲಿ ರಾವಣನ ಯುಗಾಂತ್ಯವಾಗಿತ್ತು, ಅದೇ ರೀತಿ ಧೋನಿಯ ಆಡಳಿತದ ಅಂತ್ಯವಾಗಿದೆ ಎಂದಿದ್ದಾರೆ. ಅವರ ಸೊಕ್ಕು ಮುರಿಯಲಿದೆ ಅಂತಾ ಕಿಡಿಕಾರಿದ್ದಾರೆ. ಧೋನಿ ಹಾಗೂ ಯುವರಾಜ್ ಸಿಂಗ್ ಮಧ್ಯೆ ಉತ್ತಮ ಬಾಂಧವ್ಯವಿದ್ರೂ ಯೋಗರಾಜ್ ಸಿಂಗ್ ಮಾತ್ರ ಮೊದಲಿನಿಂದ್ಲೂ ಧೋನಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...