alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಯುವಿ ನಡೆಸಿಕೊಟ್ಟ ಧೋನಿ ಸಂದರ್ಶನ

dhoni

ಮಹೇಂದ್ರ ಸಿಂಗ್ ಧೋನಿ ಭಾರವಾದ ಮನಸ್ಸಿನಿಂದ್ಲೇ ಟೀಂ ಇಂಡಿಯಾದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಆದ್ರೆ ತಮ್ಮನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದ ಆಕ್ರಮಣಕಾರಿ ಆಟವನ್ನು ಮುಂದುವರಿಸುವುದಾಗಿ ಅಭಿಮಾನಿಗಳಿಗೆ ಭರವಸೆಯನ್ನೂ ನೀಡಿದ್ದಾರೆ. ನಿನ್ನೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಧೋನಿ ಕೊನೆಯ ಬಾರಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ರು. ಆದ್ರೆ ಈ ಪಂದ್ಯದಲ್ಲಿ ಭಾರತ 3 ವಿಕೆಟ್ ಗಳ ಸೋಲು ಅನುಭವಿಸಿದೆ.

ಪಂದ್ಯದ ನಂತರ ಧೋನಿ, ಯುವರಾಜ್ ಸಿಂಗ್ ಜೊತೆ ವಿಡಿಯೋ ಚಾಟ್ ನಡೆಸಿದ್ದಾರೆ. ಹೆಲಿಕಾಪ್ಟರ್ ಶಾಟ್ ಮೂಲಕ ಅಭಿಮಾನಿಗಳನ್ನು ರಂಜಿಸೋದಾಗಿ ಭರವಸೆ ನೀಡಿದ್ದಾರೆ. 10 ವರ್ಷಗಳ ತಮ್ಮ ಪಯಣ ಅದ್ಭುತವಾಗಿತ್ತು ಅಂತಾ ಬಣ್ಣಿಸಿದ ಧೋನಿ, ಯುವರಾಜ್ ಸಿಂಗ್ 6 ಬಾಲ್ ಗೆ 6 ಸಿಕ್ಸರ್ ಬಾರಿಸಿದ ಪಂದ್ಯವನ್ನು ನೆನಪಿಸಿಕೊಂಡ್ರು.

ಯುವಿಯಂತಹ ಆಟಗಾರರಿದ್ರೆ ಗೆಲುವು ಕಷ್ಟವಲ್ಲ ಅಂತಾ ಹೇಳಿದ್ರು. ವಿಶೇಷ ಅಂದ್ರೆ ಈ ವಿಡಿಯೋ ಚಾಟ್ ನಲ್ಲಿ ಯುವರಾಜ್ ಸಿಂಗ್, ಧೋನಿಯ ಸಂದರ್ಶನ ಮಾಡಿದ್ದಾರೆ. ಯುವಿ ಕೂಡ ಈ ಸಂದರ್ಭದಲ್ಲಿ ಧೋನಿಗೆ ಧನ್ಯವಾದ ಅರ್ಪಿಸಿದ್ರು. ಈ ವಿಡಿಯೋವನ್ನು ಯುವರಾಜ್ ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿದ್ದು, ವೈರಲ್ ಆಗಿದೆ. ಯುವರಾಜ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಧೋನಿ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತಿತ್ತು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವಿದೆ ಅನ್ನೋ ವಿಚಾರ ಕೇಳಿ ಬರಲಾರಂಭಿಸಿತ್ತು. ಆದ್ರೆ ಅಂತಹ ಊಹಾಪೋಹಗಳಿಗೆಲ್ಲ ಈ ವಿಡಿಯೋ ತೆರೆ ಎಳೆದಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...