alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ಮಿಂಗ್ಹ್ಯಾಮ್ ನಲ್ಲಿ ಯುವರಾಜ್ ಗೆ ಸಿಕ್ಕಿದ ಅವಳಿ ಸಹೋದರ..!

555_1497605619_749x421

ಕ್ರಿಕೆಟ್ ದುನಿಯಾದಲ್ಲಿ ಸಿಕ್ಸರ್ ಕಿಂಗ್ ಎಂದೇ ಹೆಸರಾಗಿರುವ ಯುವರಾಜ್ ಸಿಂಗ್ ಗೆ ಗುರುವಾರ ವಿಶೇಷವಾಗಿತ್ತು. ಬಾಂಗ್ಲಾದೇಶದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯಾಡಿದ ಯುವಿಗೆ ಅದು 300ನೇ ಏಕದಿನ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ 9 ವಿಕೆಟ್ ಗಳಿಂದ ಟೀಂ ಇಂಡಿಯಾ ಫೈನಲ್ ಪ್ರವೇಶ ಮಾಡಿದ್ದು ಇನ್ನೊಂದು ಖುಷಿ.

ಟೀಂ ಇಂಡಿಯಾ ಗೆಲುವು ಸಾಧಿಸ್ತಾ ಇದ್ದಂತೆ ಯುವರಾಜ್ ಸಿಂಗ್ ಅಭಿಮಾನಿಯೊಬ್ಬರನ್ನು ಭೇಟಿಯಾದ್ರು. ಇದು ಯುವಿಗೆ ವಿಶೇಷವಾಗಿತ್ತು. ಯಾಕೆಂದ್ರೆ ಯುವರಾಜ್ ಭೇಟಿಯಾಗಿದ್ದು ತಮ್ಮನ್ನೇ ಹೋಲುವ ಅಭಿಮಾನಿಯನ್ನು. ಈ ವಿಶೇಷ ಅಭಿಮಾನಿ ಜೊತೆ ಯುವಿ ಫೋಟೊ ತೆಗೆಸಿಕೊಂಡಿದ್ದಾರೆ. ಬಿಸಿಸಿಐ ಟ್ವೀಟರ್ ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.

ಟ್ವೀಟರ್ ನಲ್ಲಿ ಬಿಸಿಸಿಐ YUVSTRONG12 X 2 ಶೀರ್ಷಿಕೆಯಡಿ ಫೋಟೋ ಹಾಕಿದೆ. ಟ್ವೀಟರ್ ನಲ್ಲಿ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ 9 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಒಂದು ಸಾವಿರಕ್ಕೂ ಹೆಚ್ಚು ಬಾರಿ ರೀ ಟ್ವಿಟ್ ಮಾಡಲಾಗಿದೆ. ಬಿಸಿಸಿಐ ಈ ಟ್ವೀಟ್ ಗೆ ಯುವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಯುವರಾಜ್ ನಂತೆ ಇನ್ನೊಬ್ಬರು ಇರಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಯುವಿ ಟ್ವಿಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...