alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಹರಾಜಿಗೆ ನೋಂದಣಿ ಮಾಡಿದ ಆಟಗಾರರೆಷ್ಟು ಗೊತ್ತಾ?

ಯುವರಾಜ್ ಸಿಂಗ್, ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್ ಸೇರಿ 1122 ಆಟಗಾರರು ಐಪಿಎಲ್ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿದ್ದಾರೆ. ಗೌತಮ್ ಗಂಭೀರ್, ಆರ್. ಅಶ್ವಿನ್, ಅಜಿಂಕ್ಯ ರಹಾನೆ, ಕುಲದೀಪ್ ಯಾದವ್, ಮುರಳಿ ವಿಜಯ್, ಕೆ. ಎಲ್. ರಾಹುಲ್ ಹರಾಜು ಕೂಡ ನಡೆಯಲಿದೆ.

ಜನವರಿ 27 ಹಾಗೂ 28ರಂದು ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. 1122 ಆಟಗಾರರ ಪಟ್ಟಿಯನ್ನು ಐಪಿಎಲ್ ನ ಎಂಟು ತಂಡಗಳಿಗೂ ಕಳುಹಿಸಲಾಗಿದೆ. ಭಾರತದ ಪರ ಆಡಿದ 281 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. 838 ಆಟಗಾರರು ಹೊಸಬರಾಗಿದ್ದಾರೆ. ಇದ್ರಲ್ಲಿ 778 ಆಟಗಾರರು ಭಾರತೀಯರಾಗಿದ್ದು ಮೂವರು ಅಸೋಸಿಯೇಟ್ ದೇಶಗಳ ಆಟಗಾರರಾಗಿದ್ದಾರೆ.

282 ವಿದೇಶಿ ಆಟಗಾರರಲ್ಲಿ 58 ಆಸ್ಟ್ರೇಲಿಯಾ, 57 ದಕ್ಷಿಣ ಆಫ್ರಿಕಾ, 39 ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್, 30 ನ್ಯೂಜಿಲ್ಯಾಂಡ್, 26 ಇಂಗ್ಲೆಂಡ್ ಆಟಗಾರರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...