alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬಿ ಮುಂದೆ ಯುವಿ ಕಣ್ಣೀರಿಟ್ಟಿದ್ದೇಕೆ ಗೊತ್ತಾ..?

2011 ರ ವಿಶ್ವ ಕಪ್ ನಲ್ಲಿ ಟೀಂ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ‘ಮ್ಯಾನ್ ಆಫ್ ದಿ ಸಿರೀಸ್’ ಪ್ರಶಸ್ತಿ ಗಳಿಸಿದ ವೇಳೆ ಅಭಿಮಾನಿಗಳು ಸಂಭ್ರಮಪಟ್ಟಿದ್ದರು. ಆದರೆ ಇದೇ ಸಂದರ್ಭದಲ್ಲಿ ಅವರ ಜೀವನದಲ್ಲಿ ಬರಸಿಡಿಲಿನಂತೆ ಬಂದೆರೆಗಿದ ಆಘಾತಕಾರಿ ಘಟನೆಯಿಂದ ಗೆದ್ದು ಬಂದ ರೀತಿ ನಿಜಕ್ಕೂ ಮಾದರಿ.

ತಮ್ಮ ವಿಶ್ವಕಪ್ ಯಶಸ್ಸನ್ನು ಇನ್ನೂ ಎಂಜಾಯ್ ಮಾಡುತ್ತಿರುವಾಗಲೇ ಅವರನ್ನು ಪರೀಕ್ಷಿಸಿದ್ದ ವೈದ್ಯರು ಯುವಿ ಕ್ಯಾನ್ಸರ್ ಗೆ ತುತ್ತಾಗಿರುವುದನ್ನು ಹೇಳಿದ್ದರು. ಕೂಡಲೇ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೇ ಕುತ್ತು ಎಂದು ಎಚ್ಚರಿಸಿದ್ದರು.

ಕ್ರೀಡಾ ಮನೋಭಾವ ರೂಢಿಸಿಕೊಂಡಿದ್ದ ಯುವಿ ಈ ವಿಚಾರವನ್ನೂ ಸ್ಪೋರ್ಟಿವ್ ಆಗಿ ತೆಗೆದುಕೊಂಡಿದ್ದು, ಅಮೆರಿಕಾದ ಬೋಸ್ಟನ್ ನಲ್ಲಿ ಚಿಕಿತ್ಸೆಗೊಳಪಡುವ ಮೂಲಕ ಕ್ಯಾನ್ಸರ್ ಮಾರಿಯನ್ನು ಗೆದ್ದು ಬಂದಿದ್ದಾರೆ. ಇದೆಲ್ಲ ವಿಚಾರವನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಹಂಚಿಕೊಂಡ ಯುವಿ, ತಮ್ಮ ಭಾವನೆಗಳನ್ನು ಹತ್ತಿಕ್ಕಲಾರದೆ ಕಣ್ಣೀರಾಗಿದ್ದಾರೆ. ಯುವಿ ಜೊತೆ ಇದ್ದ ವಿದ್ಯಾಬಾಲನ್ ಹಾಗೂ ಅಮಿತಾಭ್ ಬಚ್ಚನ್ ಅವರನ್ನು ಸಮಾಧಾನಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...