alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಯ್ತು ಯುವಿ ಪ್ರೇಯಸಿಯ ಕೋಪ

default

ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕರೂ ಟ್ವೆಂಟಿ-20 ಪಂದ್ಯದಲ್ಲಿ ಬ್ಯಾಟ್ ಹಿಡಿಯುವ ಭಾಗ್ಯ ಯುವರಾಜ್ ಸಿಂಗ್ ಗೆ ಸಿಗಲಿಲ್ಲ. ಇದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದ್ದಂತೂ ಸುಳ್ಳಲ್ಲ. ಈ ಬಗ್ಗೆ ಪರ-ವಿರೋಧ ಮಾತುಗಳು ಕೇಳಿ ಬರ್ತಾ ಇವೆ. ಯುವಿಗೆ ಒಂದು ಛಾನ್ಸ್ ಕೊಡಬೇಕಿತ್ತೆಂದು ಅಭಿಮಾನಿಗಳು ಹೇಳ್ತಿದ್ದಾರೆ. ಈ ಸಾಲಿಗೆ ಯುವರಾಜ್ ಪ್ರೇಯಸಿ ಕೂಡ ಸೇರಿದ್ದಾಳೆ.

ಯುವರಾಜ್ ಪ್ರೇಯಸಿ ಹ್ಯಾಝೆಲ್, ಟ್ವಿಟರ್ ನಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಟ್ವೆಂಟಿ ಟ್ವೆಂಟಿ ಪಂದ್ಯಕ್ಕೆ ಆಯ್ಕೆ ಮಾಡಿಯೂ ಯಾಕೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಯುವರಾಜ್ ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದೆ ಎಂಬುದು ಜನರಿಗೆ ಯಾವಾಗ ತಿಳಿಯುತ್ತೆ ಎಂದೂ ಕೇಳಿದ್ದಾರೆ.

ಆದ್ರೆ ಹ್ಯಾಝೆಲ್ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದರಿಂದ ತಕ್ಷಣ ಡಿಲಿಟ್ ಮಾಡಿದ್ದಾರಂತೆ. ಇವರೊಬ್ಬರೆ ಅಲ್ಲ ಯುವರಾಜ್ ಸಿಂಗ್ ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟೀಂ ಮ್ಯಾನೇಜ್ ಮೆಂಟ್ ನಿರ್ಧಾರದ ವಿರುದ್ಧ ಧ್ವನಿ ಎತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...