alex Certify
ಕನ್ನಡ ದುನಿಯಾ       Mobile App
       

Kannada Duniya

ಯುವರಾಜ್ ಮದುವೆ ಬಗ್ಗೆ ತಂದೆ ಯೋಗರಾಜ್ ಹೇಳಿದ್ದೇನು?

default

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಯುವಿ ಕನಸು ಕಾಣ್ತಾ ನಿದ್ದೆಗೆ ಜಾರುತ್ತಿದ್ದ ಹುಡುಗಿಯರಿಗೆ ಬ್ಯಾಡ್ ನ್ಯೂಸ್. ಯಸ್, ಯುವರಾಜ್ ಸಿಂಗ್ ಸದ್ಯದಲ್ಲಿಯೇ ಮದುವೆಯಾಗ್ತಿದ್ದಾರೆ.

ಏಷ್ಯಾ ಕಪ್ ಹಾಗೂ ಟಿ 20 ವಿಶ್ವ ಕಪ್ ನಂತ್ರ ಯುವರಾಜ್ ಬಾಲಿವುಡ್ ನಟಿ ಹ್ಯಾಝೆಲ್ ಜೊತೆ ಮದುವೆಯಾಗಲಿದ್ದಾರೆ. ಇದನ್ನು ಹೇಳಿರೋದು ಯುವರಾಜ್ ತಂದೆ ಯೋಗರಾಜ್ ಸಿಂಗ್. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಯುವರಾಜ್ ತಂದೆಗೆ, ಯುವರಾಜ್ ಮದುವೆ ಯಾವಾಗ ಎಂದು ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಯೋಗರಾಜ್, ಟಿ-20 ವಿಶ್ವಕಪ್ ಮುಗಿದ ನಂತರ ಅದ್ಧೂರಿಯಾಗಿ ಮದುವೆ ಮಾಡುವುದಾಗಿ ಹೇಳಿದ್ದಾರೆ.

ತಮ್ಮ ಮಗನ ಮದುವೆಯಲ್ಲಿ ಮನಸ್ಫೂರ್ತಿ ನೃತ್ಯ ಮಾಡುವ ಆಸೆ ವ್ಯಕ್ತಪಡಿಸಿರುವ ಯೋಗರಾಜ್, ಕ್ಯಾನ್ಸರ್ ನಂತ ಭಯಾನಕ ರೋಗವನ್ನು ಗೆದ್ದು ಬಂದಿದ್ದು, ಶ್ಲಾಘನೀಯ ಎಂದಿದ್ದಾರೆ. ಏಷ್ಯಾ ಕಪ್ ನಲ್ಲಿ ಯುವರಾಜ್ ಆಟವನ್ನು ಹೊಗಳಿದ ಯೋಗರಾಜ್, ಮುಂದಿನ ಐದು ವರ್ಷಗಳಲ್ಲಿ ಯುವರಾಜ್ ಏನು ಎಂಬುದನ್ನು ತೋರಿಸಲಿದ್ದಾರೆ ಎಂದಿದ್ದಾರೆ.

ದೀಪಾವಳಿ ವೇಳೆ ಯುವರಾಜ್ ಹ್ಯಾಝೆಲ್ ಜೊತೆ ಇಂಡೋನೇಷ್ಯಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಇಬ್ಬರೂ ಒಂದಾಗಿ ಕಾಣಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...