alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ-20 ಮ್ಯಾಚ್ ನಲ್ಲಿ ಮ್ಯಾಜಿಕ್ ಮಾಡಿದ್ದಾರೆ ಈ ಕ್ರಿಕೆಟರ್

jack-leaning-twitter_806x605_61502538454

ಕ್ರಿಕೆಟ್ ನಲ್ಲಿ ಕ್ಯಾಚಸ್ ವಿನ್ಸ್ ಮ್ಯಾಚಸ್ ಅನ್ನೋ ಮಾತೇ ಇದೆ. ಒಂದೇ ಒಂದು ಕ್ಯಾಚ್ ಪಂದ್ಯದ ಗತಿಯನ್ನು, ಫಲಿತಾಂಶವನ್ನು ಬದಲಿಸಬಲ್ಲದು. ಅಂಥದ್ದೇ ಅತ್ಯದ್ಭುತ ಕ್ಯಾಚ್ ಒಂದನ್ನು ಇಂಗ್ಲೆಂಡ್ ಜ್ಯಾಕ್ ಲೀನಿಂಗ್ ಹಿಡಿದಿದ್ದಾರೆ, ನೀವು ಊಹಿಸಿಕೊಳ್ಳಲೂ ಆಗದಂತಹ ಚಮತ್ಕಾರ ಮಾಡಿದ್ದಾರೆ.

ಇಂಗ್ಲೆಂಡ್ ನಲ್ಲಿ ಸದ್ಯ ನಾಟ್ವೆಸ್ಟ್ ಟಿ-20 ಟೂರ್ನಿ ನಡೆಯುತ್ತಿದೆ. ಯಾರ್ಕ್ ಶೈರ್ ಹಾಗೂ ಲಂಕಾಶೈರ್ ಮಧ್ಯೆ ಪಂದ್ಯ ನಡೆಯುತ್ತಿತ್ತು. ಯಾರ್ಕ್ ಶೈರ್ ತಂಡದ ಆಟಗಾರ ಜ್ಯಾಕ್ ಲೀನಿಂಗ್, ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ರು.

8ನೇ ಓವರ್ ನ ಕೊನೆಯ ಬಾಲ್ ಫುಲ್ಟಾಸ್, ಸಿಕ್ಕಿದ್ದೇ ಚಾನ್ಸ್ ಅಂತಾ ಲಂಕಾಶೈರ್ ಬ್ಯಾಟ್ಸ್ ಮನ್ ಲಿಲೀ ಬಿರುಸಿನ ಹೊಡೆತ ಬಾರಿಸಿದ್ದಾರೆ. ಇದು ಪಕ್ಕಾ ಸಿಕ್ಸರ್, ಬೌಂಡರಿ ಅಂತೂ ಗ್ಯಾರಂಟಿ ಅಂತಾನೇ ಎಲ್ರೂ ಅಂದುಕೊಂಡಿದ್ರು.

ಆದ್ರೆ ಎತ್ತರಕ್ಕೆ ನೆಗೆದ ಜ್ಯಾಕ್ ಅಸಾಧ್ಯವಾದ ಆ ಕ್ಯಾಚನ್ನು ಹಿಡಿದಿದ್ದಾರೆ. ಸಿಕ್ಸರ್ ನಿರೀಕ್ಷೆಯಲ್ಲಿದ್ದ ಲಿಲೀಯನ್ನು ಪೆವಿಲಿಯನ್ ಗೆ ಕಳಿಸಿದ್ದಾರೆ. ಜ್ಯಾಕ್ ಹಿಡಿದಿರೋ ಈ ಕ್ಯಾಚ್ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...