alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ವಿರುದ್ಧ ಕಿಡಿಕಾರಿದ ಯೋಗರಾಜ್ ಸಿಂಗ್

yuvraj-dhoni

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಯುವರಾಜ್ ಸಿಂಗ್ ಪ್ರತಿಭೆ ತೋರಲು ಧೋನಿ ಅವಕಾಶವನ್ನೇ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ಭಾರತ ಕ್ರಿಕೆಟ್ ತಂಡಕ್ಕೆ ಯುವರಾಜ್ ಸಿಂಗ್ ಅವರನ್ನು ಆಯ್ಕೆ ಮಾಡದ ಸಂದರ್ಭದಲ್ಲಿಯೂ, ಯೋಗರಾಜ್ ಸಿಂಗ್ ಅವರು ನಾಯಕ ಮಹೇಂದ್ರಸಿಂಗ್ ಧೋನಿ ವಿರುದ್ಧ ಆರೋಪ ಮಾಡಿದ್ದರು. ಧೋನಿಗೆ ಕೆಟ್ಟದಿನಗಳು ಬರಲಿವೆ. ಆತ ಬೇಕೆಂದೇ ತಮ್ಮ ಪುತ್ರನನ್ನು ಆಯ್ಕೆ ಮಾಡಿಲ್ಲ ಎಂದೆಲ್ಲಾ ದೂರಿದ್ದರು. ಅಲ್ಲದೇ, ಧೋನಿಗೆ ಭಿಕ್ಷೆ ಬೇಡುವ ಸ್ಥಿತಿ ಬರಲಿದೆ ಎಂದು ಶಾಪ ಹಾಕಿದ್ದರು. ಈಗ ಮತ್ತೆ ಯೋಗರಾಜ್ ಸಿಂಗ್, ಧೋನಿ ವಿರುದ್ಧ ಗುಡುಗಿದ್ದಾರೆ.

ಬೇಕೆಂದೇ ಧೋನಿ ತಮ್ಮ ಮಗನಿಗೆ ತಂಡದಲ್ಲಿ ಹಾಗೂ ಆಟವಾಡಲು ಅವಕಾಶ ಕೊಡುತ್ತಿಲ್ಲ. ಯುವರಾಜ್ ಸಿಂಗ್ ಭವಿಷ್ಯವನ್ನು ಧೋನಿ ಹಾಳು ಮಾಡುತ್ತಿದ್ದಾರೆ. ತಂಡಕ್ಕೆ ಮರಳಿರುವ ಯುವರಾಜ್ ಸಾಮರ್ಥ್ಯ ಬಳಸಿಕೊಂಡಿಲ್ಲ. ದುರುದ್ದೇಶದಿಂದ 7ನೇ ಕ್ರಮಾಂಕದಲ್ಲಿ ಆಟವಾಡಲು ಕಳಿಸುತ್ತಿದ್ದಾರೆ ಎಂದೆಲ್ಲಾ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...